ಅನ್ ಲಾಕ್ 3ಯಡಿ ವಂದೇ ಭಾರತ್ ಯೋಜನೆಯಡಿ ವಿಮಾನಗಳಲ್ಲಿ ಪ್ರಯಾಣಿಸುವವರಿಗಾಗಿ ಹೊಸ ನಿಯಮಗಳೊಂದಿಗೆ ಕೇಂದ್ರ ಸರ್ಕಾರ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಂದೇ ಭಾರತ್ ಯೋಜನೆಯಡಿ ವಿಮಾನಗಳಲ್ಲಿ ಮತ್ತು ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಣಮಟ್ಟ ಕಾರ್ಯನಿರ್ವಹಣೆ ಶಿಷ್ಠಾಚಾರ ಅಂದ್ರೆ ಎಸ್ ಒಪಿಗಳನ್ನು ನಿಗದಿಪಡಿಸಿ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಮಾರ್ಗಸೂಚಿ ಅನ್ವಯ ವಂದೇ ಭಾರತ್ ವಿಮಾನಗಳಲ್ಲಿ ಭಾರತಕ್ಕೆ ಬರಲು ಬಯಸುವ ಪ್ರಯಾಣಿಕರು ಆಯಾ ದೇಶಗಳಲ್ಲಿರುವ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರು, ವಿವರಗಳನ್ನು ದಾಖಲಿಸಿಕೊಳ್ಳಬೇಕು. ಆದರೆ ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸುವವರಿಗೆ ಇಂತಹ ದಾಖಲಾತಿಯ ಅವಶ್ಯಕತೆಯಿರುವುದಿಲ್ಲ. ಕಮರ್ಷಿಯಲ್ ವಿಮಾನಗಳಲ್ಲಿ ಬರುವ ಭಾರತೀಯರಿಗೆ ವಿಮಾನಯಾನ ಸಚಿವಾಲಯ ಮತ್ತು ಹಡಗು ಮೂಲಕ ಪ್ರಯಾಣಿಸುವವರಿಗೆ ಮಿಲಿಟರಿ ವ್ಯವಹಾರಗಳ ಇಲಾಖೆ ಮತ್ತು ನೌಕಾ ಸಮೂಹ ಸಚಿವಾಲಯ ಅನುಮತಿ ನೀಡುತ್ತದೆ.ಆಯಾ ಇಲಾಖೆಗಳು ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಈಗಾಗಲೇ ಭಾರತಕ್ಕೆ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಕತಾರ್, ಮಾಲ್ಡೀವ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳಿಂದ ವಿಮಾನ ವ್ಯವಸ್ಥೆಯಿದೆ. ಇನ್ನೂವರೆಗೂ 13 ದೇಶಗಳ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಲಾಗ್ತಿದೆ.