ಬೆಂಗಳೂರು, ನ.08: 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್.ಸಿ.ಸಿ (NCC) ವತಿಯಿಂದ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್.ಸಿ.ಸಿ. ಕೆಡೆಟ್ ಗಳಿಂದ “ಸ್ವಚ್ಛ ಭಾರತಕ್ಕಾಗಿ ವಂದೇ ಮಾತರಂ (Vande Mataram) ವಾಕಥಾನ್” ಅನ್ನು ಬೆಂಗಳೂರಿನ ದೂರವಾಣಿನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಂದೇ ಮಾತರಂ ಗೀತೆಗೆ 150 ವಸಂತಗಳನ್ನು ಪೂರೈಸಿದ ಈ ಸಂದರ್ಭದಲ್ಲಿ “ವಂದೇ ಮಾತರಂ” ನ ದೇಶಭಕ್ತಿಯ ವಿಷಯವನ್ನು ರಾಷ್ಟ್ರವ್ಯಾಪಿ ಪ್ರಚುರ ಪಡಿಸಲು ಎನ್.ಸಿ.ಸಿ. ವತಿಯಿಂದ ದೇಶದ ವಿವಿಧ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. “ಸ್ವಚ್ಛ ಭಾರತ” ಮಿಷನ್‌ನೊಂದಿಗೆ “ವಂದೇ ಮಾತರಂ” ಸಂಯೋಜಿಸುವ ಒಂದು ಪರಿಕಲ್ಪನೆಯಾಗಿ, ದೇಶಭಕ್ತಿ, ರಾಷ್ಟ್ರೀಯ ಕರ್ತವ್ಯದ ಮನೋಭಾವ ಮತ್ತು ಸ್ವಚ್ಛ ದೇಶವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿ ಜನರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಚಿತ್ತಾಪುರ RSS ಪಥಸಂಚಲನ ವಿವಾದಕ್ಕೆ ಮಹತ್ವದ ತಿರುವು
2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್.ಸಿ.ಸಿ. ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ನೇತೃತ್ವದಲ್ಲಿ ಯೂನಿಟ್‌ನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಶೈಲಜಾ ಆರಾಧ್ಯ ಹಾಗೂ ಎನ್. ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಎಚ್. ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








