3ನೇ ಮದುವೆ ಮುರಿದು ಬಿದ್ದ ಮೇಲೆ ಸಿಂಗಲ್ ‘ಆಗಿದ್ದೇನೆ ಲಭ್ಯವಿದ್ದೇನೆ’ ಎಂದ ವನಿತಾ – 4ನೇ ವಿವಾಹದ ಬಗ್ಗೆ  ಮಾತು..!  

1 min read

3ನೇ ಮದುವೆ ಮುರಿದು ಬಿದ್ದ ಮೇಲೆ ಸಿಂಗಲ್ ‘ಆಗಿದ್ದೇನೆ ಲಭ್ಯವಿದ್ದೇನೆ’ ಎಂದ ವನಿತಾ – 4ನೇ ವಿವಾಹದ ಬಗ್ಗೆ  ಮಾತು..!

ಚೆನ್ನೈ:  ಒಟ್ಟು ಮೂರು ಮದುವೆಗಳನ್ನಾಗಿ ಮೂರು ಬಾರಿಯೂ ವಿಚ್ಛೇದನ ಪಡೆದಿರುವ  ತಮಿಳು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‍ಕುಮಾರ್ ಬಗ್ಗೆ ಇತ್ತೀಚೆಗೆ 4ನೇ ಮದುವೆಯ ಗಾಸಿಪ್ ಭಾರೀ ಸದ್ದು ಮಾಡ್ತಿದೆ.. ಇತ್ತೀಚೆಗಷ್ಟೇ 3ನೇ ಪತಿಗೆ ಡೈವೋರ್ಸ್ ನೀಡಿದ ವನಿತಾ ಇದೀಗ ತಮ್ಮ 4ನೇ ಮದುವೆ ಬಗ್ಗೆ ಹರಿದಾಡ್ತಿರುವ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.. ‘ನಾನು ಸಿಂಗಲ್ ಆಗಿದ್ದೇನೆ ಲಭ್ಯವಾಗಿದ್ದೇನೆ , ದಯಮಾಡಿ ನನ್ನ ಬಗ್ಗೆ ವದಂತಿಗಳನ್ನ ಹಬ್ಬಿಸಬೇಡಿ, ವದಂತಿಗಳನ್ನ ನಂಬಬೇಡಿ ಎಂದಿದ್ದಾರೆ.

ಟ್ವಿಟ್ಟರ್ ನಲ್ಲಿ #Boycott Kareena Kapoor ಟ್ರೆಂಡಿಂಗ್ – ಸೀತೆ ಪಾತ್ರಕ್ಕೆ ಕರೀನಾ ಅರ್ಹರಲ್ಲ… ಕಂಗನಾ ಬೆಸ್ಟ್..!  

ಅಂದ್ಹಾಗೆ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ವನಿತಾ, ಕಳೆದ ವರ್ಷ ಲಾಕ್ ಡೌನ್ ನಲ್ಲಿ ವಿಎಫ್ ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ವಿವಾಹವಾಗಿದ್ದರು.. ಕೆಲವೇ ತಿಂಗಳ ಬಳಿಕ ಪತಿಯಿಂದ ದೂರ ಆಗಿದ್ದರು. ಪತಿ ಪೀಟರ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ವನಿತಾ ಪತಿ ಪೀಟರ್ ಮೋಸ ಮಾಡಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದರು.  ಪೀಟರ್‍ ನನ್ನು ತುಂಬಾ ಪ್ರೀತಿಸುತ್ತಿದ್ದೆ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದೆ. ಆದರೆ ಆತನಿಗೆ ಕುಡಿತದ ಚಟ ಇರುವುದು ತಿಳಿದಿರಲಿಲ್ಲ. ನನ್ನ ಮಕ್ಕಳಿಗೆ ತಂದೆಯನ್ನು ಬಯಸಿ, ವಿವಾಹವಾಗಿದ್ದೆ. ಆದರೆ ಪೀಟರ್ ಮೋಸ ಮಾಡಿದ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd