ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಟೀಮ್ ಇಂಡಿಯಾ ಟಿ-ಟ್ವೆಂಟಿ ತಂಡದಲ್ಲಿ ಬೀದರ್ ಯುವಕ ವರುಣ್ ಚಕ್ರವರ್ತಿ

Mahesh M Dhandu by Mahesh M Dhandu
October 27, 2020
in IPL 2020, Newsbeat, ಕ್ರೀಡೆ
varun chakravarthy
Share on FacebookShare on TwitterShare on WhatsappShare on Telegram

varun chakravarthy ವರುಣ್ ಚಕ್ರವರ್ತಿ…  2020ರ ಐಪಿಎಲ್ ನಲ್ಲಿ ಬೆಳಕಿಗೆ ಬಂದ ಪ್ರತಿಭೆ. ಹುಟ್ಟೂರು ನಮ್ಮ ಕರ್ನಾಟಕ. ಅದು ಕೂಡ ಬೀದರ್ ಯುವಕ. ಆದ್ರೆ ಬೆಳೆದಿದ್ದು ಎಲ್ಲಾ ತಮಿಳುನಾಡು. ಸದ್ಯ ಐಪಿಎಲ್ ನಲ್ಲಿ ಆಡುತ್ತಿರುವ ತಂಡ ಕೊಲ್ಕತ್ತಾ ನೈಟ್ ರೈಡರ್ಸ್.

varun chakravarthy
ಹೌದು, ಡೆಲ್ಲಿ ವಿರುದ್ಧ ಐದು ವಿಕೆಟ್ ಗಳಿಸಿ ತಂಡದ ಗೆಲುವಿನ ರೂವಾರಿಯಾಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಮ್ ಇಂಡಿಯಾದ ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 6, 2026
ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026

ಎಲ್ಲದಕ್ಕೂ ಒಂದು ಸಮಯ ಅಂತ ಇದ್ದೇ ಇರುತ್ತೆ. ಅದಕ್ಕಾಗಿ ಕಾಯಬೇಕು ಅಷ್ಟೇ.. ಸಮಯದ ಹಿಂದೆ ನಾವು ತಿರುಗುತ್ತಲೇ ಇರಬೇಕು. ಇದಕ್ಕೆ ಉತ್ತಮ ನಿದರ್ಶನ ವರುಣ್ ಚಕ್ರವರ್ತಿ. ತನ್ನ 28ರ ಹರೆಯದಲ್ಲಿ ಟೀಮ್ ಇಂಡಿಯಾ ಪ್ರವೇಶಿಸಿದ್ದ ವರುಣ್ ಚಕ್ರವರ್ತಿಗೆ ಇದು ಅನಿರೀಕ್ಷಿತವೂ ಹೌದು.. ಅಚ್ಚರಿಯೂ ಹೌದು.
ಬಹುಶಃ ವರುಣ್ ಚಕ್ರವರ್ತಿ ಕೂಡ ಅಂದುಕೊಂಡಿರಲಿಲ್ಲ. ತಾನು ಟೀಮ್ ಇಂಡಿಯಾದ ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಅಂತ. ಯಾಕಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಪ್ರವೇಶ ಮಾಡುವುದೇ ದೊಡ್ಡ ಸಾಹಸ. ಸ್ಪರ್ಧಾತ್ಮಕ ದಿನಗಳಲ್ಲಿ ತನಗೆ ಇಂತಹುದ್ದೊಂದು ಅವಕಾಶ ಸಿಗುತ್ತೆ ಅಂತ ವರುಣ್ ಕನಸಿನಲ್ಲೂ ಅಂದುಕೊಂಡಿರಲಿಲ್ಲ.

ಅಷ್ಟಕ್ಕೂ ಕೆಕೆಆರ್ ಪರ ಆಡಲು ಅವಕಾಶ ಸಿಕ್ಕಿದ್ದೇ ವರುಣ್ ಚಕ್ರವರ್ತಿಗೆ ಅದೃಷ್ಟದಿಂದ.
ಸುನೀಲ್ ನರೇನ್ ಅವರ ಬೌಲಿಂಗ್ ಸಂಶಯಾಸ್ಪದ ರೀತಿಯಲ್ಲಿದೆ ಎಂಬ ಆರೋಪ ಕೇಳಿಬಂದಿತ್ತು. ಆಗ ಕೆಕೆಆರ್ ತಂಡದ 11ರ ಬಳಗದಲ್ಲಿ ವರುಣ್ ಚಕ್ರವರ್ತಿಗೆ ಆಡುವ ಅವಕಾಶ ಸಿಕ್ಕಿತ್ತು.

ಸಿಕ್ಕ ಅವಕಾಶವನ್ನೇ ಸರಿಯಾಗಿಯೇ ಬಳಸಿಕೊಂಡ್ರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚು ಹರಿಸಿದ್ರು. ಅಲ್ಲದೆ ತನ್ನ ಪ್ರತಿಭೆ ಮತ್ತು ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು.

ಇದು ಒಂದೇ ಸಾಕಿತ್ತು.. ಆಯ್ಕೆಗಾರರ ಗಮನ ಸೆಳೆದ ವರುಣ್ ಈಗ ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗುವಂತೆ ಮಾಡಿತ್ತು.

ವರುಣ್ ಚಕ್ರವರ್ತಿ ಮಿಸ್ಟ್ರೀ ಸ್ಪಿನ್ನರ್. ಲೆಗ್ ಸ್ಪಿನ್ನರ್ ಆಗಿದ್ರೂ ಕೂಡ ತನ್ನ ಚಾಣಕ್ಯ ಬೌಲಿಂಗ್ ಮೂಲಕ ಬ್ಯಾಟ್ಸ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುವ ತಂತ್ರಗಾರಿಕೆ ವರುಣ್ ಚಕ್ರವರ್ತಿ ಅವರಲ್ಲಿದೆ.

ವಾಸ್ತು ಶಿಲ್ಪ ಇಂಜಿನಿಯರ್ ಪದವೀಧರನಾಗಿರುವ ವರುಣ್ ಚಕ್ರವರ್ತಿ ಮೂಲತಃ ಬೀದರ್ ನವರು. ಆದ್ರೆ ಓದಿದ್ದು ತಮಿಳುನಾಡಿನ ಸೇಂಟ್ ಪಾಟ್ರಿಕ್ ಸ್ಕೂಲ್ ನಲ್ಲಿ. ಎಳವೆಯಿಂದಲೇ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದ ವರುಣ್ ಚಕ್ರವರ್ತಿ, ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿದ್ದರು.

varun chakravarthy

ಶಾಲಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ರೂ ತಮಿಳುನಾಡು ವಿವಿಧ ವಯೋಮಿತಿ ತಂಡಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ವರುಣ್ ಚಕ್ರವರ್ತಿ ಶಿಕ್ಷಣದತ್ತ ಮುಖ ಮಾಡಿದ್ದರು. ಆದ್ರೆ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಲಿಲ್ಲ.

ಬಹುಮುಖ ಪ್ರತಿಭೆಯಾಗಿರುವ ವರುಣ್ ಚಕ್ರವರ್ತಿ ಅವರು, ಅದ್ಭುತವಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ಹಾಗೇ ಗಿಟಾರ್ ಮತ್ತು ಕೊಳಲು ಕೂಡ ನುಡಿಸುತ್ತಾರೆ.

ಕೊಳಲು ವಾ ಹಾಗೇ ಕ್ರಿಯೇಟಿವ್ ಸ್ಕಿಲ್ ಕೂಡ ಹೊಂದಿದ್ದರು. ಅಲ್ಲದೆ ವಾಸ್ತು ಶಿಲ್ಪದಲ್ಲಿ ಪದವಿ ಪಡೆದು ಕೆಲ ಸಮಯ ಕಂಪೆನಿಯೊಂದರಲ್ಲಿ ಉದ್ಯೋಗ ಕೂಡ ಮಾಡಿದ್ದರು.

ಇದನ್ನೂ ಓದಿ : ಐಪಿಎಲ್ 2020- ಸತತ ಐದನೇ ಗೆಲುವು.. ಕಿಂಗ್ಸ್ ಆಸೆ ಇನ್ನೂ ಜೀವಂತ

ಬಳಿಕ ಮತ್ತೆ ಅವರನ್ನು ಕ್ರಿಕೆಟ್ ಸೆಳೆಯಿತ್ತು. 2018ರಲ್ಲಿ ತಮಿಳುನಾಡು ಕ್ರಿಕೆಟ್ ಲೀಗ್ ನಲ್ಲಿ ಆಡುವ ಮೂಲಕ ವರುಣ್ ಚಕ್ರವರ್ತಿ ಮತ್ತೆ ಮುಂಚೂಣಿಗೆ ಬಂದ್ರು. ಆಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿತ್ತು.

2018ರಲ್ಲಿ ತಮಿಳುನಾಡು ಕ್ರಿಕೆಟ್ ನಲ್ಲಿ ಮತ್ತೆ ಮಿಂಚು ಹರಿಸಿದ್ರು. ನಾಲ್ಕನೇ ಡಿವಿಷನ್ ಆಡುತ್ತಿದ್ದ ವರುಣ್ ಮೊದಲ ಡಿವಿಷನ್ ನಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಅಲ್ಲದೆ ಮಾಜಿ ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್ ಅವರ ಮಾರ್ಗದರ್ಶನವನ್ನು ಕೂಡ ಪಡೆದಿದ್ದರು.

2018-19ರಲ್ಲಿ ತಮಿಳುನಾಡು ರಣಜಿ ತಂಡ ಪ್ರವೇಶಿಸಿದ್ದರು. ಅಲ್ಲದೆ ವಿಜಯ ಹಜಾರೆ ಟ್ರೋಫಿಯಲ್ಲೂ ಆಡಿದ್ದರು. 2020ರಲ್ಲಿ ವರುಣ್ ಚಕ್ರವರ್ತಿ ಅವರು ಕೆಕೆಆರ್ ತಂಡದ ಪಾಲಾದ್ರು. ಇಲ್ಲಿ ದಿನೇಶ್ ಕಾರ್ತಿಕ್ ಸಹಾಯವೂ ಇದೆ.

varun chakravarthy

ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ವರುಣ್ ಚಕ್ರವರ್ತಿಯ ಪ್ರತಿಭೆಯನ್ನು ಗುರುತಿಸಿದ ದಿನೇಶ್ ಕಾರ್ತಿಕ್ ಕೆಕೆಆರ್ ನಲ್ಲಿ ಅವಕಾಶ ನೀಡಿದ್ರು. ಈ ಅವಕಾಶದಿಂದ ಈಗ ವರುಣ್ ಚಕ್ರವರ್ತಿ ಟೀಮ್ ಇಂಡಿಯಾಗೆ ಆಯ್ಕೆಯಾಗುವಂತೆ ಮಾಡಿತ್ತು.

ಇನ್ನು ವರುಣ್ ಚಕ್ರವರ್ತಿ ಅವರು ಸಾಂಪ್ರದಾಯಿಕ ಲೆಗ್ ಸ್ಪಿನ್ನರ್ ಅಲ್ಲ. ಅವರ ಬತ್ತಳಿಕೆಯಲ್ಲಿ ಲೆಗ್ ಬ್ರೇಕ್, ಗೂಗ್ಲಿ, ಆಫ್ ಬ್ರೇಕ್ ಹೀಗೆ ಆರು ಎಸೆತಗಳನ್ನು ವಿಭಿನ್ನ ಮಾದರಿಯಲ್ಲಿ ಎಸೆಯುವ ಸಾಮಥ್ರ್ಯ ಮತ್ತು ನೈಪುಣ್ಯತೆ ಕೂಡ ಇದೆ.

ಒಟ್ಟಿನಲ್ಲಿ ವರುಣ್ ಚಕ್ರವರ್ತಿಯವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯೂ ಅವರ ಮೇಲಿದೆ. ಆಲ್ ದಿ ಬೆಸ್ಟ್ ವರುಣ್ ಚಕ್ರವರ್ತಿ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: indiaIPLVarun Chakravarthy
ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 6, 2026
0

ದಿನ ಭವಿಷ್ಯ: 06-03-2026 * ಮೇಷ ರಾಶಿ ಇಂದು ನಿಮಗೆ ಉತ್ಸಾಹಭರಿತ ದಿನವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ....

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram