ನಟ ವಸಿಷ್ಠ ಸಿಂಹ ವರ್ಸಟೈಲ್ ಆಕ್ಟರ್ ಅನ್ನೋದ್ರಲ್ಲಿ ಎರೆಡು ಮಾತಿಲ್ಲ.. ಎಲ್ಲಾ ರೀತಿಯ ಪಾತ್ರಗಳಲ್ಲೂ ಅವರು ಜೀವ ತುಂಬುತ್ತಾರೆ.. ಇದೀಗ ವಸಿಷ್ಠ ಸಿಂಹ ಅವರು ಸಖತ್ ಡೇರಿಂಗ್ ಆಗಿದ್ದಾರೆ.. ಲಾಂಗ್ ಹಿಡಿದು ದರ್ಶನ ಕೊಟ್ಟಿದ್ದಾರೆ..
ವಸಿಷ್ಠ ಸಿಂಹ ಅಭಿನಯದ ಹೊಸ ಸಿನಿಮಾ Love Lee ಪೋಸ್ಟರ್ ನಿಂದಲೇ ಭಾರೀ ಸೌಂಡ್ ಮಾಡ್ತಿದೆ.. ಈ ಪೋಸ್ಟರ್ ನಲ್ಲಿ ಲಾಂಗ್ ಹಿಡಿದು ವಸಿಷ್ಠ ಸಖತ್ ಡೇರಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು ಖಡಕ್ ಲುಕ್ ನಲ್ಲಿ ವಸಿಷ್ಠ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಕೈಯಲ್ಲಿ ಸಿಗ್ರೇಟ್ ಹಿಡಿದಿರುವುದು ಕಂಡುಬಂದಿದೆ..
ಅಂದ್ಹಾಗೆ ಈ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ನಾಯಕನ ಇಂಟ್ರಡಕ್ಷನ್ ಸೀನ್ ಅನ್ನು ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ. ಇದೇ ವೇಳೆ ಚಿತ್ರತಂಡ ವಸಿಷ್ಠ ಸಿಂಹ ಲಾಂಗ್ ಹಿಡಿದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.