ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆ ದೇಶದಾದ್ಯಂತ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಶಾಲೆಗಳನ್ನೂ ತೆರೆಯುವ ಮಾತೇ ಇಲ್ಲ ಎಂದು ಕೇಂದ್ರದ ಸರ್ಕಾರ ಸ್ಪಷ್ಟಪಡಿಸಿದೆ. ಆದ್ರೆ ಗಣಿನಾಡು ಬಳ್ಳಾರಿಯ ವಿದ್ಯಾರ್ಥಿಗಳು ಮಾತ್ರ ಕಲಿಗೆ ದೂರವಾಗಿಲ್ಲ. ಜಿಲ್ಲೆಯ ಶಾಲಾ ಮಕ್ಕಳು ಕೊರೊನಾ ಮಧ್ಯಯೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಹೌದು..! ಕೊರೊನಾದಿಂದಾಗಿ ಶಾಲಾ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳು ಅಡ್ಡದಾರಿ ಹಿಡಿಯುವ ಸಾಧ್ಯತೆಗಳಿರುವ ಸಾಧ್ಯತೆಗಳಿವೆ. ಇದನ್ನು ಮನಗಂಡ ಶಿಕ್ಷಣ ಇಲಾಖೆ ವಠಾರ ಶಾಲೆ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇದು ಬಳ್ಳಾರಿಯಲ್ಲಿ ಗ್ರ್ಯಾಂಡ್ ಸಕ್ಸಸ್ ಆಗಿದೆ. ವಠಾರ ಶಾಲೆ ಎಂದ್ರೆ ಮಕ್ಕಳು ಇರುವ ಜಾಗಕ್ಕೆ ಹೋಗಿ, ಒಂದೆರಡು ತಾಸು ಕಲಿಕೆಯನ್ನು ಜಾರಿಯಲ್ಲಿಡುವ ಪ್ರಯೋಗ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳಲ್ಲಿ ಕೊರೊನಾ ಜಾಗೃತಿ ಸಹ ಮೂಡಿಸಲಾಗುತ್ತೆ. ಇದಕ್ಕೆ ಬಳ್ಳಾರಿಯಲ್ಲಿ ಶಿಕ್ಷಕರ ಹಾದಿಯಾಗಿ ಪೋಷಕರು ಸಹಮತ ಸೂಚಿಸ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಈಗಾಗಲೇ 285 ವಠಾರ ಶಾಲೆಗಳನ್ನು ನಡೆಸಲಾಗುತ್ತಿದೆ. ಸಿರುಗುಪ್ಪ, ಹಡಗಲಿ,ಸಂಡೂರು,ಬಳ್ಳಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಯೂ ಪ್ರಯೋಗ ಸಕ್ಸಸ್ ಕಾಣುತ್ತಿದೆ.








