Vedha : ಶಿವಣ್ಣ ಅಭಿನಯದ 125 ನೇ ಚಿತ್ರ ಇಂದು ಬಿಡುಗಡೆ….
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125 ನೇ ಚಿತ್ರ ವೇದ ಇಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ಈಗಾಗಲೇ ಮೊದಲ ಶೋ ನೋಡಿ ಹೊರಬಂದ ಅಭಿಮಾನಿಗಳು ಶಿವಣ್ಣನ ಫರ್ಮಾಮೆನ್ಸ್ ಮೆಚ್ಚಿಕೊಂಡಿದ್ದಾರೆ.
ಬೆಂಗಳೂರಿನ ಕೆಲ ಥೀಯೇಟರ್ ಗಳಲ್ಲಿ ಬೆಳಿಗ್ಗೆ 4.30 ರಿಂದಲೇ ಚಿತ್ರಪ್ರದರ್ಶನ ನಡೆಯುತ್ತಿದೆ. ಅಭಿಮಾನಿಗಳು ಕಟೌಟ್ ಗಳುಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಶಿವಣ್ಣನೊಟ್ಟಿಗೆ ಎ ಹರ್ಷ ನಿರ್ದೇಶನದ ನಾಲ್ಕನೇ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣನೊಟ್ಟಿಗೆ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಂಫೋಸ್ ಮಾಡಿರುವ ಹಲವು ಹಾಡುಗಳು ಈಗಾಗಲೇ ಹಿಟ್ ಆಗಿವೆ. ಇದರ ಜೊತೆಗೆ ಅದಿತಿ ಸಾಗರ್ ಸೇರಿದಂತೆ ಬಹು ತಾರಾಂಗಣದ ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ಕೇಳಿಬಂದಿದೆ. 1965, 1985 ಹಾಗೂ 2021ರ ಕಾಲಘಟ್ಟಗಳಲ್ಲಿ ನಡೆಯೋ ಕಥೆಯಾನ್ನ ಚಿತ್ರದಲ್ಲಿ ತೋರಿಸಲಾಗಿದೆ.
Vedha : Shivanna’s 125th movie released today….