Veer Savarkar |ನವ ಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್
ತುಮಕೂರು : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ವೀರ್ ಸಾವರ್ಕರ್ ವಿವಾದ ಮುನ್ನೆಲೆಗೆ ಬಂದಿದೆ.
ಬಿಜೆಪಿ ಸರ್ಕಾರ ಮತ್ತು ಹಿಂದೂ ಸಂಘಟನೆಗಳು ವೀರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿದ್ದರೇ ಕಾಂಗ್ರೆಸ್ ವೀರ್ ಸಾವರ್ಕರ್ ವಿರುದ್ಧ ಹೇಳಿಕೆಯನ್ನು ನೀಡುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ. ಅದರಂತೆ ಬಿಜೆಪಿ ಎಸ್ ಟಿ ಯುವ ಮೋರ್ಚಾ ಕಾರ್ಯಕರ್ತರು ನವದಂಪತಿಗೆ ಸಾವರ್ಕರ್ ಫೋಟೋ ಗಿಫ್ಟ್ ನೀಡಿದ್ದಾರೆ.
![Veer Savarkar photo gift for new couple saaksha tv](http://saakshatv.com/wp-content/uploads/2022/08/savarkar-tmk.jpg)
ತುಮಕೂರಿನ ಸಿದ್ದಿವಿನಾಯಕ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.
ತುಮಕೂರಿನಲ್ಲಿ ವೀರ್ ಸಾವರ್ಕರ್ ಫ್ಲೇಕ್ಸ್ ಜಟಾಪಟಿ ಶುರುವಾಗಿದೆ.
ಶಿವಮೊಗ್ಗದಲ್ಲಿ ಶುರುವಾದ ಈ ಫ್ಲೆಕ್ಸ್, ಫೋಟೋ ವಿವಾದ ಇದೀಗ ರಾಜ್ಯದಾದ್ಯಂತ ಹಬ್ಬಿದೆ. ರಾಜಕೀಯ ನಾಯಕರು ಪರಸ್ಪರ ಕಚ್ಚಾಡುತ್ತಿದ್ದಾರೆ. Veer Savarkar photo gift for new couple