ಆಗ 20 ಲಕ್ಷ… ಈಗ 8 ಕೋಟಿ ಬಾಚಿದ ವೆಂಕಟೇಶ್ ಅಯ್ಯರ್ venkatesh-iyer saaksha tv
ಒಂದು ಬಾರಿ ಐಪಿಎಲ್ ಹರಾಜಿನಲ್ಲಿ ಮಾರಾಟವಾದ್ರೆ ಸಾಕು ಮಿನಿಮಮ್ ಲಕ್ಷಾಧಿಪತಿ ಆಗಬಹುದು.
ಅದೇ ತಂಡದಲ್ಲಿ ಆಡುವ ಅವಕಾಶ ಪಡೆದು.. ಪ್ರತಿ ಪಂದ್ಯದಲ್ಲೂ ಮ್ಯಾಚ್ ನಲ್ಲಿ ಮಿಂಚಿದ್ರೆ ಫ್ರಾಂಚೈಸಿಗಳು ಕೋಟಿ ಕೋಟಿ ಕೊಟ್ಟು ಆಟಗಾರನನ್ನ ಖರೀದಿ ಮಾಡುತ್ತವೆ.
ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದಿರುವ ಅದೆಷ್ಟೋ ಕ್ರಿಕೆಟಿಗರು ಐಪಿಎಲ್ ಪುಣ್ಯ ಎಂಬಂತೆ ಲಕ್ಷ್ಮಿ ಪುತ್ರರಾಗಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಕೆಕೆಆರ್ ತಂಡದ ಆಲ್ ರೌಂಡರ್ ವೆಂಕಟೇಶ್ ಅಯ್ಯರ್..!
ಹೌದು..! ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಸದ್ಯ ಐಪಿಎಲ್ ನ ಮಿಲಿಯನ್ ಬೇಬಿ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು 20 ಲಕ್ಷ ನೀಡಿ ಖರೀದಿ ಮಾಡಿತ್ತು.
ಯುಎಇ ನಲ್ಲಿ ನಡೆದ ಐಪಿಎಲ್ ನಲ್ಲಿ ಕೆಕೆಆರ್ ಪರ ಮೈದಾನಕ್ಕಿಳಿದ ಅಯ್ಯರ್, ಉತ್ತಮ ಪ್ರದರ್ಶನ ನೀಡಿದರು.
10 ಪಂದ್ಯಗಳಲ್ಲಿ ಕೆಕೆಆರ್ ಓಪನರ್ ಆಗಿ ಬ್ಯಾಟ್ ಬೀಸಿದ ವೆಂಕಟೇಶ್ ಅಯ್ಯರ್, 370 ರನ್ ಗಳಿಸಿದ್ದರು.
ಕೊನೆಯ ಸ್ಥಾನದಲ್ಲಿದ್ದ ಕೆಕೆಆರ್ ತಂಡ ಫೈನಲ್ ತಲುಪುವಲ್ಲಿ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು.
ಅವರ ಈ ಪ್ರದರ್ಶನಕ್ಕೆ ಮೆಚ್ಚಿರುವ ಕೆಕೆಆರ್ ತಂಡ ಅವರಿಗೆ 8 ಕೋಟಿ ರುಪಾಯಿ ನೀಡಿ ರಿಟೈನ್ಡ್ ಮಾಡಿಕೊಂಡಿದೆ.
ಇದರೊಂದಿಗೆ ವೆಂಕಟೇಶ್ ಅಯ್ಯರ್ ಅವರ ಸಂಬಳ ಸುಮಾರು 40 ಪಟ್ಟು ಹೆಚ್ಚಾಗಿದೆ.
ಇನ್ನು ಕೆಕೆಆರ್ ತಂಡ ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ , ವೆಂಕಟೇಶ್ ಅಯ್ಯರ್ ಮತ್ತು ಸುನಿಲ್ ನರೇನ್ ಅವರನ್ನು ರಿಟೈನ್ಡ್ ಮಾಡಿಕೊಂಡಿದೆ.









