ಮುಂಬೈನ ಥಿಯೇಟರ್ ಗಳಲ್ಲಿ “ವೇನಂ” ಸೀಕ್ವೆಲ್ ರಿಲೀಸ್ – ಸಿನಿಪ್ರಿಯರು ಖುಲ್ ಖುಷ್
ಕೋವಿಡ್ ಹಾವಳಿಯಿಂದಾಗಿ ಇಡೀ ದೇಶಾದ್ಯಂತ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಸೋದ್ಯಮ ಸಿನಿಮಾರಂಗ ಸೇರಿದಂತೆ ಹಲವು ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಆದ್ರೆ ಕರ್ನಾಟಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಿನಿಮಾಮಂದಿರಗಳು ಓಪನ್ ಆಗಿ ಸ್ಟಾರ್ ಸಿನಿಮಾಗಳು , ಹೊಸಬರ ಸಿನಿಮಾಗಳು ಯಶಸ್ವಿಯಾಗಿ ತೆರೆಕಾಣ್ತಿವೆ. ಇನ್ನೂ ಹಲವೆಡೆ 50 % ಸೀಟಿಂಗ್ ಇದ್ರೆ , ಇನ್ನೂ ಕೆಲವೆಡೆ 100 % ಸೀಟಿಂಗ್ ಗೆ ಅನುಮತಿ ನೀಡಲಾಗಿದೆ.
ಆದ್ರೆ ಇಷ್ಟು ದಿನಗಳಾದ್ರೂ ವಾಣಿಜ್ಯ ನಗರಿ ಮುಂಬೈನಲ್ಲಿ ಮಾತ್ರ ಥಿಯೇಟರ್ ಗಳನ್ನ ಬಂದ್ ಮಾಡಲಾಗಿತ್ತು. ಇದೀಗ ಇಂದಿನಿಂದ ಮುಂಬೈನಲ್ಲಿ ಥಿಯೇಟರ್ ಗಳು ಪುನರಾರಂಭವಾಗಿದ್ದು, ಅಲ್ಲಿನ ಸಿನಿಪ್ರಿಯರು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅವರ ಖುಷಿಯನ್ನ ವೇನಮ್ ಸಿನಿಮಾ ಮತ್ತಷ್ಟು ಹೆಚ್ಚಿಸಿದೆ.
ಹೌದು ಮಹಾರಾಷ್ಟ್ರಾದ್ಯಂತ ಸಿನಿಮಾ ಮಂದಿರಗಳಲ್ಲಿ ಅಕ್ಟೋಬರ್ 22 ಅಂದ್ರೆ ಇಂದಿನಿಂದ “ವೇನಮ್ ಲೆಟ್ ದೇರ್ ಬಿ ದ ಚೇಂಜ್” ಸಿನಿಮಾ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡೋದಕ್ಕೆ ಅಲ್ಲಿನ ಜನ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಟ್ವೀಟ್ ಗಳನ್ನ ಮಾಡುತ್ತಾ ಇದ್ದಾರೆ.
2018 ರ ಸೂಪರ್ ಹಿಟ್ ಸಿನಿಮಾ ವೇನಮ್ ನ ಮುಂದುವರಿದ ಭಾಗವಾದ ಈ ಚಿತ್ರವನ್ನು ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಇಂಡಿಯಾ ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಹಾರ್ಡಿ ಪತ್ರಕರ್ತ ಎಡ್ಡಿ ಬ್ರಾಕ್ ಅಕಾ-ಹೀರೋ ವೆನಮ್ ಆಗಿ ಹಿಂದಿರುಗುವುದನ್ನ ನೋಡಬಹುದು.
ಈ ಚಿತ್ರವನ್ನು ನಟ-ಚಲನಚಿತ್ರ ನಿರ್ಮಾಪಕ ಆಂಡಿ ಸೆರ್ಕಿಸ್ ನಿರ್ದೇಶಿಸಿದ್ದಾರೆ. ರೂಬೆನ್ ಫ್ಲೀಶರ್ ಅವರಿಂದ ನಿರ್ದೇಶಕರ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಇದರಲ್ಲಿ ನಟ ವುಡಿ ಹ್ಯಾರೆಲ್ಸನ್ ವಿರೋಧಿ ಕ್ಲೆಟಸ್ ಕಸಾಡಿ ಅಕಾ ಕಾರ್ನೇಜ್ ಆಗಿ ಕಾಣಿಸಿಕೊಳ್ಳುತ್ತಾರೆ, ಅವರು “ವೆನಮ್” ನಲ್ಲಿ ಕೊನೆಯ ಕ್ಷಣದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿಶೆಲ್ ವಿಲಿಯಮ್ಸ್, ನವೋಮಿ ಹ್ಯಾರಿಸ್, ರೀಡ್ ಸ್ಕಾಟ್ ಮತ್ತು ಸ್ಟೀಫನ್ ಗ್ರಹಾಂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
https://twitter.com/search?q=%23VenomReleasesInMumbai&src=trend_click&vertical=trends
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ರಾಜ್ ಗೆ ಹುಟ್ಟುಹಬ್ಬದ ಸಂಭ್ರಮ