ಮುಂಬೈನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ
ಮುಂಬೈ, ಸೆಪ್ಟೆಂಬರ್07: ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಭೂಕಂಪನ ಸಂಭವಿಸಿದೆ. ಇದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.5 ಎಂದು ದಾಖಲಾಗಿದೆ.
ಭೂಕಂಪನವು ಮುಂಬೈಯಿಂದ ಉತ್ತರಕ್ಕೆ 102 ಕಿ.ಮೀ ದೂರದಲ್ಲಿ ಬೆಳಿಗ್ಗೆ 8 ಗಂಟೆಗೆ ಅನುಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂಬ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಇದಕ್ಕೂ ಮುನ್ನ ಶನಿವಾರ ಮಹಾರಾಷ್ಟ್ರದ ಮುಂಬೈಯಿಂದ ಉತ್ತರಕ್ಕೆ 98 ಕಿ.ಮೀ ದೂರದಲ್ಲಿ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಬೆಳಿಗ್ಗೆ 6: 36 ಕ್ಕೆ ಭೂಕಂಪ ಸಂಭವಿಸಿದೆ.