ಮೋದಿ @ 20 ಡ್ರೀಮ್ ಮೀಟ್ ಡಿಲವರಿ” ಪುಸ್ತಕ ಬಿಡುಗಡೆಗೊಳಿಸಿದ ಉಪರಾಷ್ಟ್ರಪತಿ
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳ ರಾಜಕೀಯ ಜೀವನವನ್ನು ಕಟ್ಟಿಕೊಡುವ “ಮೋದಿ @ 20 ಡ್ರೀಮ್ ಮೀಟ್ ಡಿಲವರಿ ” ಪುಸ್ತಕವನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಂದು ದೆಹಲಿಯ ವಿಜ್ಞಾನ ಭವನದಲ್ಲಿ ಬಿಡುಗಡೆ ಮಾಡಿದರು.
ದೇಶ, ಜನತೆ ಮತ್ತು ಯುವಪೀಳಿಗೆಗೆ ಪ್ರಧಾನಿ ನೀಡಿರುವ ಕೊಡುಗೆಯ ಒಳ-ಹೊರಗನ್ನು ಅರಿಯುವ ಅಗತ್ಯವಿದೆ. ದೇಶ ಇಂದು ವಿಶ್ವಾದ್ಯಂತ ಮನ್ನಣೆ ಪಡೆದ ಗೌರವಾನ್ವಿತ ಪ್ರಧಾನಿಯನ್ನು ಹೊಂದಿದೆ ಎಂಬ ಹೆಮ್ಮೆ ಎಲ್ಲರಿಗೂ ಇದೆ ಎಂದರು. ತಾವು ರಾಜಕೀಯದಲ್ಲಿದ್ದಾಗ ಅವರೊಂದಿಗೆ ಸಚಿವನಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿತ್ತು. ಈಗ ರಾಜ್ಯಸಭೆಯ ಸಭಾಪತಿಯಾಗಿಯೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಎಲ್ಲ ಅನುಭವಗಳು ಸಂತೋಷದಾಯಕವಾದವು ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಶ್ವಾಸವಿಟ್ಟವರಿಗೆ, ಸಂಪೂರ್ಣ ರೂಪಿತ ವ್ಯಕ್ತಿತ್ವದ ಹಾದಿಯ ಬಗ್ಗೆ ವಿಶ್ವಾಸವಿಟ್ಟವರಿಗೆ ಅದರಲ್ಲೂ ವಿಶೇಷವಾಗಿ ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಸೇವೆ ಸಲ್ಲಿಸಬಯಸುವವರಿಗೆ “ಮೋದಿ @ 20 ಡ್ರೀಮ್ ಮೀಟ್ ಡಿಲವರಿ ” ಪುಸ್ತಕ ಮುಂಬರುವ ದಿನಗಳಲ್ಲಿ ಭಗವದ್ಗೀತೆಯಂತೆ ಮಾರ್ಗದರ್ಶನ ನೀಡಲಿದೆ ಎಂದರು.








