ಅಲೆ ನಮ್ಮ ಕಡೆ ಇದೆ, ಗೆಲುವು ನಮ್ಮದೇ : ಸಿದ್ದರಾಮಯ್ಯ

1 min read
Siddaramaiah

ಅಲೆ ನಮ್ಮ ಕಡೆ ಇದೆ, ಗೆಲುವು ನಮ್ಮದೇ : ಸಿದ್ದರಾಮಯ್ಯ Siddaramaiah

ಬೆಂಗಳೂರು : ಮೂರು ಕಡೆ ಕಾಂಗ್ರೆಸ್ ಪರ ಅಲೆ ಇದೆ. ಮೂರು ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ.

ಮೂರು ಕಡೆ ಕಾಂಗ್ರೆಸ್ ಪರ ಅಲೆಯಿದೆ. ಮೂರು ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿ, ಸರ್ಕಾರ ಸಾರಿಗೆ ನೌಕರರನ್ನು ಕರೆದು ಮಾತನಾಡಬೇಕು.

ಮುಷ್ಕರ ನಿರತರ ಮನವೊಲಿಸಬೇಕು. ಹೆದರಿಸಿ, ಬೆದರಿಸ್ತಿನಿ ಅಂದ್ರೆ ಅದು ಮುರ್ಖತನ ಎಂದು ಕಿಡಿಕಾರಿದರು.

Siddaramaiah

ಕೊರೊನಾ ಹೆಚ್ಚಳ ಕುರಿತು ಮಾತನಾಡಿ, ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ.

ಇದು ಸರ್ಕಾರದ ಫೆಲ್ಯೂರ್, ಹೊರಗಡೆಯಿಂದ ಬಂದವರನ್ನ ಟೆಸ್ಟ್ ಮಾಡಲಿಲ್ಲ. ಸರಿಯಾಗಿ ಟೆಸ್ಟ್ ಮಾಡೋದನ್ನ ನಿಲ್ಲಿಸಿಬಿಟ್ರು.

ಜಾತ್ರೆ, ಸಮಾರಂಭಗಳನ್ನ ಸರಿಯಾಗಿ ನಿಯಂತ್ರಣ ಮಾಡಲಿಲ್ಲ. ಚುನಾವಣಾ ಪ್ರಚಾರ ಮಾಡಿದ್ರು. ಪ್ರಚಾರಕ್ಕೂ ನಿಯಂತ್ರಣ ಹಾಕಬೇಕಿತ್ತು ಎಂದು ಅಭಿಪ್ರಾಯಪಟ್ಟರು.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd