ADVERTISEMENT
Saturday, November 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಅಸ್ಪೃಶ್ಯತೆ ವಿಚಾರ..!

saaksha tv by saaksha tv
March 6, 2020
in Newsbeat, Politics, Samagra karnataka
maheSh
Share on FacebookShare on TwitterShare on WhatsappShare on Telegram

ಬೆಂಗಳೂರು : ವಿಧಾನಸಭೆಯಲ್ಲಿಂದು ಅಸ್ಪೃಶ್ಯತೆ ವಿಚಾರ ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎನ್.ಮಹೇಶ್ ಅವರು, ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರವಾಗಿದ್ದರೂ ಶೇ.70ರಷ್ಟು ಹಳ್ಳಿಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೀವಂತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ತಾವು ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ತಮ್ಮ ಸ್ನೇಹಿತನ ಮನೆಯಲ್ಲಿ ಊಟ ಮಾಡಿದ ವಿಚಾರವನ್ನು ಪ್ರಸ್ತಾಪಿಸಿ, ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ನಾವೆಲ್ಲ ತಲೆ ತಗ್ಗಿಸಬೇಕು ಎಂದರು.

Related posts

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

November 28, 2026
ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ  ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

November 28, 2026

ಈ ವೇಳೆ ಎದ್ದು ನಿಂತ ಕಾಂಗ್ರೆಸ್ ಶಾಸಕ ಡಾ.ರಂಗನಾಥ್, ತಾವು ವೈದ್ಯರಾಗಿದ್ದು, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಜಾತಿ ನೋಡುವುದಿಲ್ಲ. ರಕ್ತ ಬಳಸುವಾಗ ಜಾತಿ ನೋಡುವುದಿಲ್ಲ. ಯುವ ಸಮುದಾಯದಲ್ಲಿ ಜಾತಿ ಧರ್ಮ ಯಾರೂ ಕೇಳುತ್ತಿಲ್ಲ. ನಮ್ಮಲ್ಲಿ ಬದಲಾವಣೆಯಾಗಬೇಕು, ದೌರ್ಜನ್ಯ ಪ್ರಕರಣಗಳ ಪರಿಶೀಲನೆಯೂ ಆಗಬೇಕು ಎಂದರು.

ಇದಕ್ಕೆ ಆಕ್ಷೇಪವೆಂಬಂತೆ ಮಾತನಾಡಿದ ಶಾಸಕ ಡಾ.ಅನ್ನದಾನಿ, ಮೆಡಿಕಲ್ ಕಾಲೇಜ್‍ ವೊಂದರಲ್ಲಿ ನನ್ನ ಮಗ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಜೊತೆಯಲ್ಲೇ ಕುಳಿತು ಕಾಫಿ ತಿಂಡಿ ತಿನ್ನುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನನ್ನ ಮಗನ ಜಾತಿ ಕೇಳಿದ್ದಾರೆ. ಆತ ಯಾವುದೇ ಕೀಳರಿಮೆ ಇಲ್ಲದೆ ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಹೇಳಿದ್ದಾನೆ. ಆದಾದ ಮೇಲೆ ನನ್ನ ಮಗನ ಜೊತೆ ಮಾತನಾಡುತ್ತಿದ್ದ ವಿದ್ಯಾರ್ಥಿನಿ ಎದುರಿಗೆ ಸಿಕ್ಕಿದರೂ ಮಾತನಾಡುತ್ತಿಲ್ಲವಂತೆ ಎಂದರು.

ಬಳಿಕ ಜೆಡಿಎಸ್ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿ, 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಸೊಂಟ ಮುರಿದುಕೊಂಡಿದ್ದ ವ್ಯಕ್ತಿಗೆ ಹಣ ಖರ್ಚು ಮಾಡಿ ಚಿಕಿತ್ಸೆ ಮಾಡಿಸಿದ್ದೆ. ಆ ವ್ಯಕ್ತಿ ಮನೆಗೆ ಹೋದಾಗ ನಮ್ಮನ್ನು ಸ್ಪರ್ಶ ಸಮುದಾಯಕ್ಕೆ ಸೇರಿದವರಲ್ಲ. ಹಾಗಾಗಿ ಬೇರೆ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದರು ಎಂದು ತಾವು ಅನುಭವಿಸಿದ ನೋವಿನ ಕಥೆಯನ್ನು ಹೇಳಿಕೊಂಡರು. ಈ ವೇಳೆ ಮಾತನಾಡಿದ ಜಿ.ಟಿ.ದೇವೇಗೌಡ, ಸಾಕಷ್ಟು ಸುಧಾರಣೆಯಾಗಿದೆ. ಅಸ್ಪೃಶ್ಯತೆ ನಿವಾರಣೆಯಾಗಿದೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳಿವೆ. ಅದನ್ನು ಸರಿಪಡಿಸಬೇಕಿದೆ. ಅಸ್ಪೃಶ್ಯತೆ ನಿವಾರಣೆಗೆ ಕಾನೂನಿದೆ ಎಂದರು.

ಆಗ ಮತ್ತೆ ಮಾತನಾಡಿದ ಎನ್. ಮಹೇಶ್ ಅವರು, ಸಮಾಜದಲ್ಲಿ ಬದಲಾವಣೆಯಾಗುತ್ತಿಲ್ಲ ಎಂದು ಹೇಳಿಲ್ಲ. ಆದರೆ ಕೆಲವೆಡೆ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದೇನೆ ಎಂದರು.

Tags: G T DEVEGOUDAkarnatakaN MAHESH
ShareTweetSendShare
Join us on:

Related Posts

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 30ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ!

by Shwetha
November 28, 2026
0

ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಕರಾವಳಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ...

ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ  ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

ಹಗಲಿನ ಟ್ರಾಫಿಕ್ ಒತ್ತಡ ತಗ್ಗಿಸಲು ಮಾಸ್ಟರ್ ಪ್ಲಾನ್: ಪ್ರಧಾನಮಂತ್ರಿಗಳ ಸಲಹೆ ಬೆನ್ನಲ್ಲೇ ಬೆಂಗಳೂರಿನಲ್ಲಿ 24/7 ರೆಸ್ಟೋರೆಂಟ್ ತೆರೆಯಲು ಸಿಗಲಿದೆಯೇ ಗ್ರೀನ್ ಸಿಗ್ನಲ್?

by Shwetha
November 28, 2026
0

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಹಾಗೂ ಬೃಹತ್ ಮಹಾನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ದೇಶದ ಇತರ ಪ್ರಮುಖ ಮೆಟ್ರೋ ನಗರಗಳ ಮಾದರಿಯಲ್ಲೇ ದಿನದ 24 ಗಂಟೆಯೂ (24/7)...

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

ಇನ್ಮುಂದೆ ಬದಲಾಗಲಿದೆ ವಿದ್ಯುತ್ ಬಿಲ್ ಲೆಕ್ಕಾಚಾರ! ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ: ಪಕ್ಕದ ಮನೆಯವರಷ್ಟೇ ಯುನಿಟ್ ಬಳಸಿದರೂ ಬಿಲ್ ಮಾತ್ರ ಬೇರೆ ಬೇರೆ! 2029ರ ಏಪ್ರಿಲ್‌ನಿಂದ ಎಲ್ಲಾ ಗ್ರಾಹಕರಿಗೂ ಹೊಸ ರೂಲ್ಸ್

by Shwetha
November 28, 2026
0

ನವದೆಹಲಿ: ದೇಶಾದ್ಯಂತ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯ ನಡುವೆ ಸಮತೋಲನ ಕಾಯ್ದುಕೊಂಡು ಅದಕ್ಕೆ ಅನುಗುಣವಾಗಿ ವಿದ್ಯುತ್ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯವು ಕ್ರಾಂತಿಕಾರಿ ಹೆಜ್ಜೆಯೊಂದನ್ನು...

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

by Shwetha
November 28, 2026
0

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ನಿಲುವು ತಳೆದಿದೆ. ಯಾವುದೇ...

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

by Shwetha
November 28, 2026
0

ಮುಂಬೈ: ಉತ್ತರ ಪ್ರದೇಶದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram