vidya balan : ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ ವಿದ್ಯಾ ಬಾಲನ್ ಅವತಾರ…
ಸೀರೆಯಲ್ಲಿ ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳವಂತೆ ಮಾಡುವ ಹಲವು ನಟಿಯರಲ್ಲಿ ವಿದ್ಯಾ ಬಾಲನ್ ಕೂಡ ಒಬ್ಬರು. ಸದಾ ಸೀರೆಯಲ್ಲಿಯೇ ಕಂಗೋಳಿಸುತ್ತಿದ್ದ ವಿದ್ಯಾ ಬಾಲನ್ ನನಗೆ ಸೀರೆಯೇ ಇಷ್ಟ ಎನ್ನುವುದನ್ನ ಹಲವು ಬಾರಿ ಹೇಳಿಕೊಂಡಿದ್ದಾರೆ. ತಮ್ಮ ಬಳಿ ಬಣ್ಣ ಬಣ್ಣದ ಹಲವು ವಿಶಿಷ್ಟ ಕಲೆಕ್ಷನ್ ಗಳನ್ನೂ ಇಟ್ಟು ಕೊಂಡಿದ್ದಾರೆ.
ಇಂಥಹ ಸೀರೆಯ ನೀರೇ ಇದೀಗ ಎಲ್ಲರೂ ಅಚ್ಚರಿ ಪಡುವಂತೆ ಪೋಟೋಗೆ ಪೋಸ್ ನೀಡಿದ್ದಾರೆ ಅದೂ ಕೂಡ ಬೆತ್ತಲೆಯಾಗಿ ಕೇವಲ ನ್ಯೂಸ್ ಪೇಪರ್ ಅಡ್ಡ ಇಟ್ಟುಕೊಂಡು ಪೋಸ್ ಕೊಟ್ಟು ಎಲ್ಲರನ್ನು ಬೆಚ್ಚಿ ಬೀಳಸಿದ್ದಾರೆ. ಪೋಟೋಗ್ರಾಫರ್ ಡಬ್ಬೂ ರತ್ನಾನಿ ಇತ್ತೀಚೆಗೆ ನಟಿ ವಿದ್ಯಾಬಾಲನ್ ಅವರ ಪೋಟೋ ಹಂಚಿಕೊಂಡಿದ್ದು ಸೋಶಿಯಲ್ ಮಿಡಿಯಾದಲ್ಲಿ ಬೆಂಕಿ ಹಚ್ಚಿದೆ.
View this post on Instagram
ಡಬ್ಬೂ ರತ್ನಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೊಟೋ ಹಂಚಿಕೊಂಡಿದ್ದಾರೆ. ದಿನಪತ್ರಿಕೆಯೊಂದಿಗೆ ಮೈ ಮುಚ್ಚಿಕೊಂಡು ಕಾಫಿ ಕಪ್ ಹಿಡಿದು ಕಣ್ಣಿಗೆ ಶೇಡ್ ಧರಿಸಿ ಹೈ ಹೀಲ್ಸ್ ನೊಂದಿಗೆ ಕಣ್ಣೋಟದಿಂದ ಕೊಲ್ಲುವಂತೆ ಲುಕ್ ನೀಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದು ಹಲವರು ದಿ ಡರ್ಟಿ ಪಿಕ್ಚರ್ ನ್ನ ನೆನಪಿಸಿಕೊಂಡಿದ್ದಾರೆ.
ಈ ಹಿಂದೆ ರಣಬೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಮಾಡಿಸಿಕೊಂಡಾಗ ವಿದ್ಯಾ ಬಾಲನ್ ಅವರ ಪರವಾಗಿ ಮಾತನಾಡಿದ್ದರು. ಗಂಡಸರು ಹೀಗೆ ಹಾಟ್ ಹಾಟ್ ಕಾಣಿಸಲಿ ಎಂದು ಹೇಳಿದ್ದರು. ಇನ್ನೂ ವಿದ್ಯಾ ಬಾಲನ್ ಸಿನಿಮಾಗಳ ಕುರಿತು ಮಾತನಾಡುವುದಾದರೇ ಕೊನೆಯದಾಗಿ ಶೆಫಾಲಿ ಶಾ ಅವರೊಂದಿಗೆ ಜಲ್ಸ ದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಉತ್ತಮ ವಿಮರ್ಶೆಯನ್ನೂ ಪಡೆದಿದೆ.
Vidya Balan: Vidya Balan’s avatar set fire on social media…