ವಿಯಟ್ನಾಂನಲ್ಲಿ ಭಾರತ–ಬ್ರಿಟನ್ ಮಿಶ್ರಣದ ಹೊಸ ರೂಪಾಂತರ ಕೊರೊನಾ ವೈರಸ್ ಪತ್ತೆ
ವಿಯಟ್ನಾಂನಲ್ಲಿ ಭಾರತ–ಬ್ರಿಟನ್ ಮಿಶ್ರಣದ ಹೊಸ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ.. ಇದು ಭಾರತ ಮತ್ತು ಬ್ರಿಟನ್‌ನ ಕೋವಿಡ್–19 ರೂಪಾಂತರದ ಮಿಶ್ರಣವಾಗಿದ್ದು, ಗಾಳಿಯಲ್ಲಿ ವೇಗವಾಗಿ ಹರಡುತ್ತದೆ ಎಂದು ಆರೋಗ್ಯ ಸಚಿವ ಎನ್ ಗುಯೆನ್ ಥಾನ್ಹ ಲಾಂಗ್ ತಿಳಿಸಿದ್ದಾರೆ. ಸದ್ಯ ಹೊಸ ಪ್ರಬೇಧದ ವೈರಸ್ ಪತ್ತೆಯಾಗಿದ್ದು, ಅಲ್ಲಿನ ಜನರ ಆತಂಕ್ಕೆ ಕಾರಣವಾಗಿದೆ. ಅಲ್ಲಿನ ಆಡಳಿತ ವೈರಸ್ ಕುರಿತಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಲಲು ಮುಂದಾಗಿದೆ. ಹೊಸದಾಗಿ ಗುರುತಿಸಲಾದ ಕೋವಿಡ್ ರೋಗಿಗಗಳ ಆನುವಂಶಿಕ ಅನುಕ್ರಮದ ಪರೀಕ್ಷೆ ನಡೆಸಿದಾಗ ಭಾರತ ಮತ್ತು ಇಂಗ್ಲೆಂಡ್‌ನ ಕೋವಿಡ್ ರೂಪಾಂತರದ ಮಿಶ್ರಣ ಪತ್ತೆಯಾಗಿದೆ ಎಂದು ಎನ್ ಗುಯೆನ್ ತಿಳಿಸಿದ್ದಾರೆ. ಇದು ನಿರ್ದಿಷ್ಟವಾಗಿ ಭಾರತೀಯ ರೂಪಾಂತರವಾಗಿದ್ದರೂ ಮೂಲದಲ್ಲಿ ಇಂಗ್ಲೆಂಡ್ ರೂಪಾಂತರದ ಲಕ್ಷಣಗಳು ಹೊಂದಿದೆ ಎಂದು ವರದಿಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.