ಇಂಟರ್ ವ್ಯೂವ್ ನಲ್ಲಿ ಫೇಲ್… 9 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ
ಹನೋಯಿ : ಇಂಟರ್ ವ್ಯೂವ್ ನಲ್ಲಿ ಫೇಲ್ ಆಗೋದಕ್ಕೆ ತನ್ನ ಮುಖವೇ ಕಾರಣ ಎಂದು ಭಾವಿಸಿ ಯುವಕನೊರ್ವ ಬರೋಬ್ಬರಿ 9 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಎಲ್ಲರ ಉಬ್ಬೇರುವಂತೆ ಮಾಡಿದ್ದಾನೆ.
ಹೌದು..! ವಿಯೆಟ್ನಾಂನ 26 ವರ್ಷದ ಡು ಕುಯೆನ್ ಹೆಸರಿನ ಯುವಕ ಜಾಬ್ ಇಂಟರ್ ವ್ಯೂವ್ ಗೆ ಹೋದಾಗ ಘೋರ ಅವಮಾನಕ್ಕೆ ಗುರಿಯಾಗಿದ್ದ. ಇಂಟರ್ ವ್ಯೂವ್ ಮಾಡೋ ವ್ಯಕ್ತಿ ಡು ಕುಯೆನ್ ಮುಖ ನೋಡಿ ಗೇಲಿ ಮಾಡಿದ್ದನಂತೆ. ಈ ಘಟನೆ ಆ ಯುವಕನ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಹೇಗಾದರೂ ಮಾಡಿ ಮುಖ ಬದಲಿಸಿಕೊಳ್ಳಬೇಕು ಎಂದು ನಿರ್ಧಾರಕ್ಕೆ ಬರುವಂತೆ ಮಾಡಿತ್ತು ಆ ಬೆಳೆವಣಿಗೆ. ಅದರಂತೆ 12 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿ ಯುವಕ, 9 ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನ ಮಾಡಿಸಿಕೊಂಡಿದ್ದಾನೆ.
ಬಳಿಕ ತನ್ನ ಹಿಂದಿನ ಫೋಟೋ ಮತ್ತು ಸರ್ಜರಿ ನಂತರದ ಫೋಟೋವನ್ನ ಟಿಕ್ ಟಾಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಇದನ್ನ ನೋಡಿದ ಆತನ ಸ್ನೇಹಿತರು ಯಾರಿದು..? ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೆ ವಿಷಯ ಗೊತ್ತಾದ ಮೇಲೆ ನಿಜವಾಗ್ಲೂ ನೀನೇನಾ..? ಅಂತಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದಿಷ್ಟೆ ಅಲ್ಲದೆ ಪ್ಲಾಸ್ಟಿಕ್ ಸರ್ಜರಿಗಳ ನಂತರ ಮನೆಗೆ ಬಂದಾಗ ಕುಟುಂಬಸ್ಥರು ಕೂಡ ಆಶ್ಚರ್ಯಕ್ಕೆ ಗುರಿಯಾಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಯುವಕ, ಪ್ರತಿ ಕ್ಷಣ ದೃಢಚಿತ್ತದಿಂದಿರಿ. ನಿಮ್ಮನ್ನ ಆತ್ಮವಿಶ್ವಾಸದಿಂದ ಇರಿಸೋ ಸೌಂದರ್ಯಕ್ಕಾಗಿ ಅನ್ವೇಷನೆ ಮಾಡಿ. ನನ್ನ ದೃಷ್ಠಿಯಲ್ಲಿ ಸೌಂದರ್ಯ ಅಂದ್ರೆ ಕನ್ನಡಿಯಲ್ಲಿ ನಮ್ಮನ್ನ ನಾವು ನೋಡಿಕೊಂಡಾಗ ಸಂತೃಪ್ತಿಯಾಗಿರಬೇಕು ಅಂತಾ ಹೇಳಿದ್ದಾರೆ.