‘THE RAPAGE ‘ / ಆರ್ಯ : ವಿಜಯ್ ದೇವರಕೊಂಡ – ಸುಕುಮಾರ್ ಮುಂದಿನ ಸಿನಿಮಾ ಯಾವುದು..??

1 min read

‘THE RAPAGE ‘ / ಆರ್ಯ : ವಿಜಯ್ ದೇವರಕೊಂಡ – ಸುಕುಮಾರ್ ಮುಂದಿನ ಸಿನಿಮಾ ಯಾವುದು..??

ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಬರೆದು , ಅಮೇಜಾನ್ ನಲ್ಲೂ  ಮಿಲಿಯನ್ ಗಟ್ಟಲೆ ವೀವ್ಸ್ ಪಡೆಯುತ್ತಿರುವ ಪುಷ್ಪದ ಸಕ್ಸಸ್ ನಲ್ಲಿ ನಿರ್ದೇಶಕ ಸುಕುಮಾರ್ ಇದ್ದಾರೆ.. ಅಲ್ಲದೇ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಿದ್ದು , ಬಹುತೇಕ ಶೂಟಿಂಗ್ ಮುಗಿದಿದೆ ಎನ್ನಲಾಗ್ತಿದೆ..

ಮತ್ತೊಂದೆಡೆ ಪ್ಯಾನ್ ಇಂಡಿಯಾ ಬಹುನಿರೀಕ್ಷಿತ ಲೈಗರ್ ಸಿನಿಮಾದಲ್ಲಿರುವ ವಿಜಯ್ ದೇವರಕೊಂಡ.. ಪುರಿಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಆಗಸ್ಟ್ 25 ಕ್ಕೆ ರಿಲೀಸ್ ಆಗಲಿದೆ.. ಆದ್ರೆ ಈ ಇಬ್ಬರೂ ಈಗ ಹೊಸ ಸಿನಿಮಾಗೆ ಒಂದಾಗ್ತಿದ್ದಾರೆ.. ಈ ಸುದ್ದಿ ಹೊಸದೇನೂ ಅಲ್ಲ.. ಆದ್ರೆ ಧಮಾಕೇದಾರ್ ನ್ಯೂಸ್ ಅಂದ್ರೆ ಈ ಸಿನಿಮಾಗೆ ಬಂಡವಾಳ ಹೂಡುಗುವುದು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಎನ್ನಲಾಗಿದೆ..vijay devarakonda - saakshatv

ಹೌದು.. ಅಲ್ಲು ಅರ್ಜುನ್ ಬಂಡವಾಳ ಹೂಡಿ ವಿಜಯ್ ದೇವರಕೊಂಡ – ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಇದು ಆರ್ಯ  ಸಿನಿಮಾದ ಮುಂದುವರೆದ ಭಾಗ.. ಆದ್ರೂ ಕಥೆ ಬೇರೆಯದ್ದೇ  ಇರುತ್ತೆ..

ಆದ್ರೆ ಈ ಬಗ್ಗೆ ವಿಜಯ್ ದೇವರಕೊಂಡ ಹೇಳೋ ಕಥೆಯೇ ಬೇರೆ.. ಸುಕುಮಾರ್  ಹಾಗೂ ವಿಜಯ್ ಅವರ ಸಿನಿಮಾ ಆರ್ಯ ಅಲ್ಲ ಬದಲಾಗಿ  ‘THE RAPAGE ‘ ಎಂದು ಹೇಳಿಕೊಂಡಿದ್ದರು..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd