ಲೈಗರ್ ಬಳಿಕ ಖಾಕಿ ತೊಡಲು ಸಿದ್ಧವಾದ ವಿಜಯ್ ದೇವರಕೊಂಡ…
ಪುರಿ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೇ ಥಿಯೇಟರ್ ನಲ್ಲಿ ಟುಸ್ ಪಟಾಕಿ ಎಂದು ಸಾಬೀತಾಯ್ತು. ಬಜೆಟ್ ನಲ್ಲಿ ಅರ್ಧದಷ್ಟೂ ಗಳಿಸುವಲ್ಲಿ ಫೇಲ್ ಆಗಿತ್ತು. ವಿತರಕರು ನಿರ್ಮಾಕರ ನಡುವೆ ಜಟಾಪಟಿಯೇ ನಡೆದುಹೋಗಿತ್ತು.. ಸಿನಿಮಾದ ಹೈಪ್ ರಿಲೀಸ್ ಗೂ ಮುನ್ನ ಕೊಟ್ಟಿದ್ದ ಬಿಲ್ಡ್ ಅಪ್ ನಿಂದಾಗಿ ಸಿನಿಮಾ ಸೋತಾಗ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದವರಲ್ಲಿ ಪುರಿ , ವಿಜಯ್ , ಚಾರ್ಮಿ ಅನನ್ಯಾ ಕೂಡ ಇದ್ದರು.
ಸದ್ಯ ಸೋತು ಬೇಸತ್ತು ಹೋಗಿದ್ದ ದೇವರಕೊಂಡ ಮತ್ತೆ ಕಮ್ ಬ್ಯಾಕ್ ಮಾಡೋಕೆ ಸಿದ್ಧರಾಗಿದ್ದು , ಹೊಸ ಸಿನಿಮಾ ಒಪ್ಪಿದ್ದಾರೆ.. ಅಂದ್ಹಾಗೆ ಈ ಸಿನಿಮಾಗೆ ಜೆರ್ಸಿ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರು ಆಕ್ಷನ್ ಕಟ್ ಹೇಳಲಿದ್ದಾರೆ.. ಲೈಗರ್ ಸೋತ ಬೆನ್ನಲ್ಲೇ ಅವರು ಹಾಗೂ ಸಮಂತಾ ಒಟ್ಟಿಗೆ ನಟಿಸುತ್ತಿರುವ ಖುಷಿ ಸಿನಿಮಾ ಅರ್ಧಕ್ಕೆ ಸ್ಥಗಿತಗೊಂಡಿದೆ.. ಇತ್ತ ಜನಗಣಮನ ಟೇಕ್ ಆಫ್ ಆಗಿಲ್ಲ.
ಈಗ ವಿಜಯ್ ಒಪ್ಪಿರುವ ಸಿನಿಮಾ ಅವರ 12ನೇ ಸಿನಿಮಾವಾಗಿದೆ. ಹೊಸ ಸಿನಿಮಾದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಅವರೇ ಸಿನಿಮಾದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಖಾಕಿ ಧರಿಸಿ ಮುಖಕ್ಕೆ ಮಾಸ್ಕ್ ಧರಿಸಲಾದ ಹಾಗೂ ಬೆಂಕಿ ಹೊತ್ತಿ ಉರಿಯುತ್ತಿರುವ ಪೋಸ್ಟರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Vijay Devarakonda : Vijay Devarakonda is ready to wear khaki after Liger…