Vijay Hazaare : ನಾರಾಯಣ್ ಜಗದೀಶನ್ ವಿಶ್ವ ದಾಖಲೆ
ಅರುಣಾಚಲ ಪ್ರದೇಶ ವಿರುದ್ಧ ತಮಿಳುನಾಡು ಆರಂಭಿಕ ಬ್ಯಾಟರ್ ನಾರಾಯಣ್ ಜಗದೀಶನ್ ವಿಜಾಯ್ ಹಜಾರೆ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿಮೈದಾನದಲ್ಲಿ ಜಗದೀಶನ್ 141 ಎಸೆತದಲ್ಲಿ 25 ಬೌಂಡರಿ 15 ಸಿಕ್ಸರ್ ಸಿಡಿಸಿ ಬರೋಬ್ಬರಿ 277 ರನ್ ಗಳಿಸಿ ದಾಖಲೆ ಬರೆದರು. ಎ ದರ್ಜೆ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಇದಾಗಿದೆ. ಮತ್ತೋರ್ವ ಓಪನರ್ ಸಾಯಿ ಸುರ್ದರ್ಶನ್ 154 ರನ್ ಹೊಡೆದರು.
ಸಾಯಿ ಸುದರ್ಶನ್ ಹಾಗೂ ಜಗದೀಶನ್ ಜೋಡಿ ಮೊದಲ ವಿಕೆಟ್ಗೆ 38.3 ಓವರ್ಗಳಲ್ಲಿ 416 ರನ್ ಜೊತೆಯಾಟ ಆಡಿತು. ಎ ದರ್ಜೆ ಕ್ರಿಕೆಟ್ನಲ್ಲಿ 400 ರನ್ ಜೊತೆಯಾಟ ಇದೇ ಮೊದಲಾಗಿದೆ.narayan jagadeeshan , vijay hazzare
2015ರಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಮತ್ತು ಸ್ಯಾಮ್ಯುವೆಲ್ಸ್ 2ನೇ ವಿಕೆಟ್ಗೆ 372 ರನ್ ಹೊಡೆದಿದ್ದರು.
ಜಗದೀಶನ್ 25 ಬೌಂಡರಿ ಜೊತೆ 15 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದರು. 2019-20ರಲ್ಲಿ ಮುಂಬೈ ತಂಡದ ಯಶಸ್ವಿ ಜೈಸ್ವಾಲ್ 12 ಸಿಕ್ಸರ್ ಹೊಡೆದಿದ್ದು ಈವರೆಗಿನ ವಿಜಯ್ ಹಜಾರೆ ಟೂರ್ನಿಯ ದಾಖಲೆಯಾಗಿತ್ತು.
ಸತತ 5 ಶತಕ
ಎ ದರ್ಜೆ ಕ್ರಿಕೆಟ್ನಲ್ಲಿ ಸತತ 5 ಶತಕ ಸಿಡಿಸಿದ ಮೊದಲ ಬ್ಯಾಟರ್ ಜಗದೀಶನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ, ದ.ಆಫ್ರಿಕಾದ ಅಲ್ಲಿರೋ ಪೀಟರ್ಸನ್ ಮತ್ತು ಕರ್ನಾಟಕ ತಂಡದ ದೇವದತ್ ಪಡಿಕಲ್ ಸತತ 4 ಶತಕ ಸಿಡಿಸಿದ್ದರು.