ರಾಜಸ್ಥಾನ್ ವಿರುದ್ಧ ಜಯ.. ಕ್ವಾರ್ಟರ್ ಫೈನಲ್ ಗೆ ಕರ್ನಾಟಕ karnataka saaksha tv
ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.
ಜೈಪುರದಲ್ಲಿ ಇಂದು ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕರ್ನಾಟಕ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಗೆಲ್ಲಲು 200 ರನ್ ಗಳ ಗುರಿ ಪಡೆದ ಕರ್ನಾಟಕ, 6.2 ಓವರ್ ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಕರ್ನಾಟಕದ ಬೌಲರ್ ಗಳು ರಾಜಸ್ಥಾನ್ ವಿರುದ್ಧ ಸವಾರಿ ಮಾಡಿದರು.
ತಂಡದ ಮೊತ್ತ 30ರ ಆಸುಪಾಸಿದ್ದಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂಧರ್ಭದಲ್ಲಿ ಕ್ರೀಸ್ ಗೆ ಬಂದ ದೀಪಕ್ ಹೂಡಾ, ಎಚ್ಚರಿಕೆಯ ಆಟವಾಡಿದರು. ಅಲ್ಲದೇ ಏಕಾಂಗಿಯಾಗಿ ಬ್ಯಾಟ್ ಬೀಸಿ ತಂಡದ ಮೊತ್ತ 199 ಮುಟ್ಟುವಂತೆ ಮಾಡಿದರು.
ಹಾಗೇ ದೀಪರ್ ಶತಕದ ಸಂಭ್ರಮ ಆಚರಿಸಿಕೊಂಡರು. ಸಮರ್ಪಿತ್ ಜೋಶಿ 33, ರವಿ ಬಿಷ್ಣೋಯ್ 17 ರನ್ ಗಳಿಸಿದರು. ಕರ್ನಾಟಕದ ಪರ ವೈಶಾಖ್ ವಿಜಯ್ ಕಮಾರ್ 22/4, ಕೆ ಗೌತಮ್ 61/2 ವಿಕೆಟ್ ಪಡೆದು ಮಿಂಚಿದರು.
ಗೆಲ್ಲಲು 200 ರನ್ ಗಳ ಸಾಧಾರಣ ಗುರಿ ಪಡೆದ ಕರ್ನಾಟಕ ತಂಡ 44ನೇ ಓವರ್ನಲ್ಲಿ 8 ವಿಕೆಟ್ ಕೈಲಿರುವಂತೆ ನಿರಾತಂಕವಾಗಿ ಗೆಲುವು ಸಾಧಿಸಿತು.
ಕೆ ಸಿದ್ಧಾರ್ಥ್ ಅಜೇಯ 85 ರನ್ ಗಳಿಸಿ ಗೆಲುವಿನ ಪ್ರಮುಖ ರೂವಾರಿ ಎನಿಸಿದರು. ರವಿಕುಮಾರ್ ಸಮರ್ಥ್ ಮತ್ತು ಮನೀಶ್ ಪಾಂಡೆ ಕೂಡ ಅರ್ಧಶತಕಗಳನ್ನ ಗಳಿಸಿದರು. ರವಿಕುಮಾರ್ ಸಮರ್ಥ್ 54, ಮನೀಶ್ ಪಾಂಡೆ ಅಜೇಯ 52 ರನ್ ಗಳಿಸಿದರು.