ಹೊಸದಿಲ್ಲಿ, ಮೇ 14 : ವಿದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ತಮ್ಮ ಸಾಲದ ಬಾಕಿ ಹಣವನ್ನು ಶೇ 100 ರಷ್ಟು ಮರುಪಾವತಿಸಲು ಸಿದ್ಧನಾಗಿರುವುದಾಗಿ ಮತ್ತು ನನ್ನ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಸರ್ಕಾರವನ್ನು ಕೋರಿದ್ದಾರೆ.
ಭಾರತಕ್ಕೆ ಗಡಿಪಾರು ಮಾಡುವ ವಿಷಯದಲ್ಲಿ ಲಂಡನ್ ನಿಂದಲೇ ಕಾನೂನು ಹೋರಾಟ ನಡೆಸಿರುವ ವಿಜಯ್ ಮಲ್ಯ, ಟ್ವೀಟ್ ಮುಖಾಂತರ ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಅನ್ನು ಸ್ವಾಗತಿಸಿದ್ದಾರೆ.

ಗುರುವಾರ ತಮ್ಮ ಟ್ವಿಟರ್ ಖಾತೆಯಲ್ಲಿ ವಿಜಯ್ ಮಲ್ಯ ‘ನಾನು ಕೋವಿಡ್ 19 ಪರಿಹಾರ ಪ್ಯಾಕೇಜ್ ಘೋಷಿಸಿರುವ ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರಿಗೆ ಬೇಕಾದಷ್ಟು ಕರೆನ್ಸಿಯನ್ನು ಅವರು ಮುದ್ರಿಸಿಕೊಳ್ಳಬಹುದು. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ 100% ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಅರ್ಥಿಕತೆ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ? ದಯವಿಟ್ಟು ನನ್ನ ಹಣವನ್ನು ಬೇಷರತ್ತಾಗಿ ತೆಗೆದುಕೊಂಡು ಬಿಟ್ಟು ಬಿಡಿ’ ಎಂದು ಬರೆದು ಕೊಂಡಿದ್ದಾರೆ.
ಈಗಾಗಲೇ ಲಂಡನ್ ಕಾನೂನಿನ ಸಮರದಲ್ಲಿ ಹಿನ್ನಡೆ ಕಂಡಿರುವ ಮದ್ಯ ದೊರೆ, ತಾನು ಶೇಕಡ 100 ಕ್ಕೆ 100 ಸಾಲವನ್ನೂ ಕೂಡಾ ಮರು ಪಾವತಿಸಿಲು ಸಿದ್ಧನಿದ್ದೇನೆ ಎಂದೂ, ತನ್ನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕ್ಲೋಸ್ ಮಾಡಿ ಎಂದು ಭಾರತ ಸರ್ಕಾರದ ಮುುಂದೆ ಅಂಗಲಾಚುತ್ತಿದ್ದಾರೆ ಎಂದು ಮಲ್ಯರ ಟ್ವೀಟ್ ಅನ್ನು ವಿಶ್ಲೇಷಿಸಲಾಗುತ್ತಿದೆ.








