ಏರ್ ಪೋರ್ಟ್ ನಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ಪ್ರಕರಣ : ಯುವಕನ ಬಂಧನ

1 min read

ಏರ್ ಪೋರ್ಟ್ ನಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ಪ್ರಕರಣ : ಯುವಕನ ಬಂಧನ

ಬೆಂಗಳೂರು : ಬೆಂಗಳೂರಿಗೆ ಕಾರ್ಯಕ್ರಮವೊಂದರ ಶೂಟಿಂಗ್ ನಿಮಿತ್ತ ಹಾಗೂ ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಲು ಆಗಮಿಸುತ್ತಿದ್ದ ವೇಳೆ ತಮಿಳು ನಟ ವಿಜಯ್ ಸೇತುಪತಿ ಮೇಲೆ ಯುವಕನೋರ್ವ ಅಚಾನಕ್ ಆಗಿ ದಾಳಿ ನಡೆಸಿದ್ದ.. ಈ ವೇಳೆ ಯುವಕನ ಮೇಲೆ ಪ್ರತಿದಾಳಿಯೂ ಆಗಿತ್ತು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಈ ಸಂಬಂಧ ವಿಜಯದ್ ಸೇತುಪತಿ ಮ್ಯಾನೇಜರ್ ಯುವಕನ ವಿರುದ್ಧ ಮೌಖಿಕ ದೂರು ಕೂಡ ಸಲ್ಲಿಸಿದ್ದರು. ಇದಾದ ನಂತರ ಯುವಕನನ್ನ ಬಂಧಿಸಲಾಗಿದೆ.  ನಟ ವಿಜಯ್‌ ಸೇತುಪತಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದ.

ನವೆಂಬರ್ 2 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಬಂಧಿತ ಯುವಕ ತಮಿಳುನಾಡಿನ ಮೂಲದವನು. ವಿಜಯ್ ಸೇತುಪತಿ ಅವರು ಪ್ರಯಾಣಿಸಿದ ವಿಮಾನದಲ್ಲೇ ಈತ ಪ್ರಯಾಣಿಸಿದ್ದ. ಪಾನಮತ್ತನಾಗಿದ್ದ ಯುವಕ ವಿಮಾನದಲ್ಲಿಯೇ ವಿಜಯ್ ಸೇತುಪತಿ ಜೊತೆಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ.   ತಮಿಳು ನಟ ವಿಜಯ್ ಸೇತುಪತಿ ಏರ್‌ರ್ಪೋರ್ಟ್‌ನಲ್ಲಿ ಬರುತ್ತಿದ್ದಾಗ ಅವರ ಗುಂಪಿನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಇದೇ ಹಲ್ಲೆ ಆರೋಪದಡಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಬೆಂಗಳೂರು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ಆರೋಪದಡಿ ಬಂಧಿತನಾಗಿರುವ ವ್ಯಕ್ತಿ ಕೇರಳ ಮೂಲದವನು. ಆದರೆ ಬೆಂಗಳೂರಿನಲ್ಲಿ ವಾಸವಿದ್ದಾನೆ ಎನ್ನಲಾಗಿದೆ.

 

ಪ್ರಕರಣದ ಹಿನ್ನೆಲೆ

ನವೆಂಬರ್ 2ರಂದು ವಿಮಾನ ನಿಲ್ದಾಣದಲ್ಲಿ ಆ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆಗೆ ಸೆಲ್ಫಿ ಕೇಳಿದ್ದ ಎನ್ನಲಾಗಿದೆ. ಆದರೆ ಆತ ಕುಡಿದಿರೋದು ಗೊತ್ತಾಗಿ ವಿಜಯ್‌ ಫೋಟೊ ಕೊಡಲು ನಿರಾಕರಿಸಿದ್ದಾರೆ. ಆಗ ವಿಜಯ್ ಸೇತುಪತಿ ಸಹಾಯಕ ಆ ವ್ಯಕ್ತಿಯನ್ನು ತಳ್ಳಿ ಮುಂದೆ ಸಾಗಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಆ ವ್ಯಕ್ತಿ ವಿಜಯ್‌ ಸೇತುಪತಿ ಸಹಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು  ತಿಳಿದುಬಂದಿದೆ. ಆದ್ರೆ ವಿಜಯ್ ಸೇತುಪತಿಯ ಮೇಲೆಯೇ ಹಲ್ಲೆ ನಡೆಸಿರೋದಾಗಿಯೇ ಸುದ್ದಿ ಹರಿದಾಡಿತ್ತು. ಆದ್ರೆ ವಿಡಿಯೋದಲ್ಲಿ ಸರಿಯಾಗಿ ನೋಡಿದ್ರೆ ಅಸಲಿಗೆ ಹಲ್ಲೆ ಆಗಿರುವುದು ಸೇತುಪತಿ ಸಹಾಯಕರ ಮೇಲೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ.

 

ಶೋಷಿತರ ಸಂಕಟಕ್ಕೆ ದನಿಯಾದ #ಜೈ_ಭೀಮ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd