ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ತಿನ್ನುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ದರ್ಶನ್ ನೋಡಲು ಜುಲೈ 22ರಂದು ದಿನಕರ್ ತೂಗುದೀಪ್ ಜೊತೆ ಪತ್ನಿ ವಿಜಯಲಕ್ಷ್ಮಿ (Vijaylakshmi) ಬಂದಿದ್ದರು.
ಈ ವಾರವು ಕುಟುಂಬದ ಜೊತೆ ಜೈಲಿಗೆ ದರ್ಶನ್ (Darshan) ಪತ್ನಿ ತೆರಳಿ, ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಲ್ಲಿಯವರೆಗೆ ಪತಿ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮೀ 5ನೇ ಬಾರಿ ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ.
ಇಂದು ಅತ್ತಿಗೆ ಜೊತೆ ದಿನಕರ್ (Dinakar) ಕೂಡ ಆಗಮಿಸಿದ್ದರು. ಹಿಂದಿನ ವಾರ ದರ್ಶನ್ ಆರೋಗ್ಯ ಸರಿ ಇರಲಿಲ್ಲ. ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಪತಿ ಕಾಣಲು ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ದರ್ಶನ್‌ರನ್ನು ಕಾಣಲು ವಿನೋದ್ ರಾಜ್ ಕೂಡ ಜೈಲಿನ ಬಳಿ ಕಾಯುತ್ತಿದ್ದರು.
ಮನೆ ಊಟ ಮಾಡಲು ಅನುಮತಿ ನೀಡಬೇಕೆಂದು ದರ್ಶನ್ ಕೋರ್ಟ್ ಗೆ ಮನವಿ ಮಾಡಿದ್ದು, ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.








