Vijayanagara | ಮುಳುಗುವ ಹಂತದಲ್ಲಿ ಹಂಪಿ ಸ್ಮಾಕರಗಳು
ವಿಜಯನಗರ : ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ಮುಳುಗುವ ಹಂತದಲ್ಲಿದೆ.
ಈಗಾಗಲೆ ರಾಮ ಲಕ್ಷ್ಮಣ ದೇವಸ್ಥಾನಕ್ಕೆ ಹೋಗುವ ದಾರಿ ಮುಳುಗಡೆಯಾಗಿದೆ.
ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಪುರಂದರ ಮಂಟಪ ಸೇರಿದಂತೆ ರಾಮದೇವರ ಪಾದಕ್ಕೆ ನೀರು ಬರುವ ಸಾಧ್ಯತೆ ಇದೆ.

ಈಗಾಗಲೇ ಹಂಪಿಯಲ್ಲಿ ಧಾರ್ಮಿಕ ವಿಧಿವಿಧಾನ ಮಂಟಪ ಜಲಾವೃತಗೊಂಡಿದ್ದು, ನದಿಗೆ ಇಳಿಯುತ್ತಿದ್ದ ಬೋಟ್ ಗಳು ನಿಲುಗಡೆಯಾಗಿವೆ.
ಇನ್ನೂ ತುಂಗಭದ್ರಾ ಜಲಾಶಯದಿಂದ ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ.
ಹೀಗಾಗಿ ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ವಿಜಯನಗರ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.