Vijayapura | ಪ್ರೀತಿ ಬೇಡ ಎಂದಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ : ದ್ವೇಷಕ್ಕೆ ಯುವಕನ ಕೊಲೆ?
ವಿಜಯಪುರ : ಪ್ರೀತಿಗಾಗಿ ಪ್ರೇಮಿಗಳಿಬ್ಬರು ಬಲಿಯಾಗಿರುವ ಘಟನೆ ವಿಜಯಪುರದ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಕಳ್ಳಕವಟಗಿಯ ಅಪ್ರಾಪ್ತೆ, ಘೋಣಸಗಿ ಗ್ರಾಮದ ಮಲ್ಲು ಜಮಖಂಡಿ ಎಂಬುವವರ ನಡುವೆ ಪ್ರೇಮಾಂಕುರವಾಗಿತ್ತು.
ಈ ವಿಚಾರ ಹುಡುಗಿಯ ತಂದೆಗೆ ಗೊತ್ತಾಗಿದ್ದು, ಇಬ್ಬರಿಗೂ ಬುದ್ಧವಾದ ಹೇಳಿದ್ದರು.
ಆದ್ರೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇತ್ತ ಮಲ್ಲು ಶವ ಕೃಷ್ಣಾನದಿಯಲ್ಲಿ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಹುಡುಗಿಯ ಕುಟುಂಬಸ್ಥರೇ ಮಲ್ಲುವಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.