ವಿಜಯಪುರ : ಸೂಕ್ತ ಬಸ್ ಸೌಲಭ್ಯವಿಲ್ಲದೇ ಜಿಲ್ಲೆಯ ಗುಂಡಕರ್ಜಗಿ ಗ್ರಾಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ.. ಸಾರಿಗೆ ಅಧಿಕಾರಿಗಳು ಇವತ್ತು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದ್ದಾರೆ…
ಅಪಾಯವನ್ನು ಲೆಕ್ಕಿಸದೇ ನಿನ್ನೆ ಏಣಿ ಸಹಾಯದಿಂದ ಸರ್ಕಾರಿ ಬಸ್ ಟಾಪ್ ಮೆಲೇರಿ ವಿದ್ಯಾರ್ಥಿಗಳು ಪ್ರಯಾಣಿಸಿದ್ರು…
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ವಿದ್ಯಾರ್ಥಿಗಳು ಪರದಾಡಿದ್ದರು. ಈಗ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು ಗ್ರಾಮಕ್ಕೆ ಆಗಮಿಸಿದ ಮತ್ತೊಂದು ಬಸ್ ಗೆ ಪೂಜೆ ಮಾಡಿ ಗ್ರಾಮಸ್ಥರು ಸಂತಸದಿಂದ ಸ್ವಾಗತಿಸಿದ್ದಾರೆ.. ಪ್ರತಿ ದಿನ ಒಂದೇ ಬಸ್ ನಲ್ಲಿ ನೂರಕ್ಕೂ ಅಧಿಕ ಜನರ ಪ್ರಯಾಣ ಮಾಡ್ತಿದ್ರು.. ಇದೀಗ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದ್ದಕ್ಕೆ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.