Vijayapura | ಅಮಾನವೀಯವಾಗಿ ಮಹಿಳೆಯ ಮೇಲೆ ಹಲ್ಲೆ
ವಿಜಯಪುರ : ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ನಡುರಸ್ತೆಯಲ್ಲೇ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಮಹಾದೇವಿ ಪೀರಾಪೂರ ಹಲ್ಲೆಗೊಳಗಾದ ಮಹಿಳೆ.
ಆಸ್ತಿ ವಿಚಾರವಾಗಿ ಹಳೆ ದ್ವೇಷ ಹಿನ್ನೆಲೆ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ.
ಮಹಾದೇವಿ ಹೊಲದಲ್ಲಿ ಒಬ್ಬರಿದ್ದಾಗ ಆನಂದ್ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಸೇರಿ ಹಲ್ಲೆ ನಡೆಸಿದ್ದಾರೆ.
ಶ್ರೀಶೈಲ ಬಿರಾದಾರ ಮಹಾದೇವಿ ಸಂಬಂಧಿಯಾಗಿದ್ದು, ಜಮೀನು ವಿಚಾರವಾಗಿ ಹಲ್ಲೆ ನಡೆಸಲಾಗಿದೆ.
ಈ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.