ಕರಿ ಹರಿಯೋ ಆಚರಣೆ ವೇಳೆ ಜನರ ಮೇಲೆ ಎತ್ತುಗಳಿಂದ ದಾಳಿ
1 min read
ವಿಜಯಪುರ : ಕರಿ ಹರಿಯೋ ಆಚರಣೆ ವೇಳೆ ಜನರಿಗೆ ಎತ್ತು ಹೋರಿಗಳು ಇರಿದಂತಹ ಅವಘಡ ಸಂಭವಿಸಿದೆ.. ಎತ್ತು-ಹೋರಿಗಗಳು ಜನರಿಗೆ ಹಾಯಿದು , ಎತ್ತಿ ಬಿಸಾಕಿದೆ.. ಎತ್ತುಗಳಿಂದ ಹಾಯಿಸಿಕೊಂಡು ಐವರಿಗೆ ಗಾಯವಾಗಿದ್ದು ಅವರುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..
ಕಾಖಂಡಕಿ ಗ್ರಾಮದಲ್ಲಿ ಕರಿ ಹರಿಯೋ ಆಚರಣೆ ವೇಳೆ ಘಟನೆ ನಡೆದಿದೆ.. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರಹುಣ್ಣಿಮೆಯ ಏಳು ದಿನಗಳ ಬಳಿಕ ನಡೆಯೋ ಆಚರಣೆ ಇದಾಗಿದೆ.
ಎತ್ತು ಹಾಗೂ ಹೋರಿಗಳನ್ನು ಅಲಂಕಾರಿ ಮಾಡಿ ಓಡಿಸಲಾಗುತ್ತದೆ. ಈ ವೇಳೆ ಸುತ್ತಲೂ ನಿಂತಿದ್ದ ಜನರ ಮೇಲೆ ಎತ್ತು ಹಾಗೂ ಹೋರಿಗಳಿಂದ ದಾಳಿ ನಡೆದಿದೆ. ಎತ್ತುಗಳು ಓಡುತ್ತಿದ್ದರೆ ಅದನ್ನು ಹಿಡಿಯಲು ಯುವಕರು ಯತ್ನಿಸಿದ್ದಾರೆ..