Vijayapura – ಗೋಲ ಗೊಮ್ಮಟದಿಂದ ಹಾರಿ ಯುವತಿ ಆತ್ಮಹತ್ಯೆ…
ವಿಜಯಪುರ : ಐತಿಹಾಸಿಕ ಸ್ಮಾರಕ ಗೋಲಗುಮ್ಮಟದ ವಿಕ್ಷಣೆಗೆ ಬಂದಿದ್ದ ಯುವತಿಯೊಬ್ಬಳು ಸ್ಮಾರಕದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಗೋಲಗುಮ್ಮಟದ ವೀಕ್ಷಣೆಗೆ ಬಂದಿದ್ದ ವಿಜಯಪುರ ನಗರದ ರಾಣಿ ಬಗೀಚ ಪ್ರದೇಶದ ನಿವಾಸಿಯಾಗಿದ್ದ ಸೌಂದರ್ಯ ಕೃಷ್ಣಮೂರ್ತಿ ಬುಧವಾರ ಸಂಜೆ ಸ್ಮಾರಕದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಘಟನೆಯಿಂದ ಗೋಳಗುಮ್ಮಟ ವೀಕ್ಷಣೆಗೆ ಬಂದಿದ್ದ ನೂರಾರು ಪ್ರವಾಸಿಗರು ಬೆಚ್ಚಿ ಬಿದ್ದು, ಆತಂಕಕ್ಕೆ ಒಳಗಾಗಿದ್ದರು.
Vijayapura – Young woman commits suicide by jumping from Golagummata