ಶರಣಾಗು ಇಲ್ಲವೇ ಅಣ್ಣನಂತೆ ಪೊಲೀಸರಿಗೆ ಬಲಿಯಾಗು – ಕಿರಿಯ ಮಗನಿಗೆ ವಿಕಾಸ್ ದುಬೆ ತಾಯಿ ಎಚ್ಚರಿಕೆ
ಲಕ್ನೋ, ಜುಲೈ 22: ದರೋಡೆಕೋರ ವಿಕಾಸ್ ದುಬೆ ಅವರ ತಾಯಿ ತನ್ನ ಕಿರಿಯ ಮಗನಿಗೆ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದು, ಇಲ್ಲದಿದ್ದರೆ ಅವನು ಮತ್ತು ಅವನ ಕುಟುಂಬವನ್ನು ಕೊಲ್ಲಲಾಗುವುದು ಎಂದು ಎಚ‌್ಚರಿಸಿರುವುದಾಗಿ ಬುಧವಾರ ವರದಿಯಾಗಿದೆ.
ವಿಕಾಸ್ ದುಬೆಯನ್ನು ಜುಲೈ 10 ರಂದು ಉತ್ತರ ಪ್ರದೇಶ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ತಿಂಗಳ ಪ್ರಾರಂಭದಲ್ಲಿ ಪೊಲೀಸರನ್ನು ಕೊಂದ ಆರೋಪದ ಮೇಲೆ ಬಂಧನಕ್ಕೊಳಗಾದ ನಂತರ ವಿಕಾಸ್ ದುಬೆ ಮಧ್ಯಪ್ರದೇಶದಿಂದ ಮರಳಿ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ದೀಪ್ ಪ್ರಕಾಶ್ ದುಬೆಗೆ ಸರ್ಲಾ ದೇವಿ ಎಚ್ಚರಿಕೆ ನೀಡಿದ್ದಾರೆ.
ವಿಕಾಸ್ ದುಬೆಯ ಕಿರಿಯ ಸಹೋದರನನ್ನು ಇನ್ನೂ ಪತ್ತೆಹಚ್ಚಲಾಗುತ್ತಿಲ್ಲ. ಜುಲೈ 3 ರಂದು ಬಿಕ್ರು ಗ್ರಾಮದಲ್ಲಿ ನಡೆದ ಹೊಂಚುದಾಳಿಯ ನಂತರ ಬಂಧನಕ್ಕೆ ಹೆದರಿ ಆತ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ ದಾಳಿಯಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಒಬ್ಬ ನಾಗರಿಕ ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ದೀಪ್ ಪ್ರಕಾಶ್, ದಯವಿಟ್ಟು ಮುಂದೆ ಬಂದು ಶರಣಾಗು, ಇಲ್ಲದಿದ್ದರೆ ಪೊಲೀಸರು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಲ್ಲುತ್ತಾರೆ ಎಂದು ಸರ್ಲಾ ದೇವಿ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ನೀನು ಏನೂ ಮಾಡಿಲ್ಲ. ನಿನ್ನ ಸಹೋದರನೊಂದಿಗಿನ ಸಂಬಂಧದಿಂದಾಗಿ ತಲೆಮರೆಸಿಕೊಳ್ಳಬೇಡ. ಮುಂದೆ ಬಂದು ಶರಣಾಗು, ಪೊಲೀಸರು ನಿನ್ನ ರಕ್ಷಣೆ ಮಾಡುತ್ತಾರೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ತನ್ನ ಮಗ ವಿಕಾಸ್ ದುಬೆಯ ಕೊನೆಯ ವಿಧಿಗಳಿಗೆ ಹಾಜರಾಗಲು ಕೂಡ ಸರ್ಲಾ ದೇವಿ ನಿರಾಕರಿಸಿದ್ದರು ಮತ್ತು ಅವನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಪೊಲೀಸ್ ಎನ್‌ಕೌಂಟರ್‌ನಲ್ಲಿ ವಿಕಾಸ್ ದುಬೆ ಕೊಲ್ಲಲ್ಪಟ್ಟ ಒಂದು ದಿನ ಮೊದಲು, ಎಂಟು ಪೊಲೀಸರ ಹತ್ಯೆಗೆ ಕಾರಣನಾದ ತನ್ನ ಮಗನನ್ನು ಗುಂಡಿಕ್ಕಿ ಕೊಂದರೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ದೇವಿ ಹೇಳಿದ್ದರು.
ದುಬೆ ಚಿಕ್ಕ ವಯಸ್ಸಿನಿಂದಲೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತು ಕುಟುಂಬ ಸದಸ್ಯರು ಪದೇ ಪದೇ ವಿನಂತಿಸಿದರೂ ತನ್ನ ಮಾರ್ಗವನ್ನು ಬದಲಾಯಿಸಲಿಲ್ಲ ಎಂದು ದೇವಿ ಹೇಳಿದ್ದಾರೆ.
ವಿಕಾಸ್ ತನ್ನ ಕಿರಿಯ ಸಹೋದರ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಲಿಲ್ಲ. ದುಬೆ ಮತ್ತು ಆತನ ಕಿರಿಯ ಸಹೋದರನೊಂದಿಗಿನ ಸಂಬಂಧವು ಬಿಗಡಾಯಿಸಿತ್ತು ಮತ್ತು ಭಿನ್ನಾಭಿಪ್ರಾಯಗಳು ತುಂಬಾ ಗಂಭೀರವಾಗಿದ್ದರಿಂದ ಕುಟುಂಬವು ಒಂದೇ ಸೂರಿನಡಿ ವಾಸಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ವಿಕಾಸ್, ಪತ್ನಿ ರಿಚಾ ದುಬೆ ಮತ್ತು ಇಬ್ಬರು ಮಕ್ಕಳೊಂದಿಗೆ ಲಖನೌದಲ್ಲಿ ಒಂದೇ ಪ್ರದೇಶದಲ್ಲಿ ಪ್ರತ್ಯೇಕ ಮನೆಯಲ್ಲಿದ್ದರೆ, ತಾಯಿ ದೀಪ್ ಪ್ರಕಾಶ್ ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.