ಸೋಷಿಯಲ್ ಮೀಡಿಯಾ ಸ್ಟಾರ್ ವಿಕಾಸ್ ಪಾಟಕ್ ಅಲಿಯಾಸ್ ಹಿಂದುಸ್ಥಾನಿ ಭಾವ್ ಬಂಧನ
‘ರುಕೋ ಜರಾ, ಸಬರ್ ಕರೋ’… ಈ ಲೈನ್ ಗಳನ್ನ ಹೇಳುತ್ತಲೇ ಇಂತಹದ್ದೇ ಇನ್ನೂ ಕೆಲ ಅದ್ರಲ್ಲೂ ವಿವಾದಾತ್ಮಕ ಡೈಲಾಗ್ ಗಳಿಂದಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ವಿಕಾಸ್ ಪಾಟಕ್ ಅಲಿಯಾಸ್ ಹಿಂದುಸ್ಥಾನಿ ಭಾವ್ ನನ್ನ ಪೊಲೀಸರು ಬಂಧಿಸಿದ್ದಾರೆ.
12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಬೇಕು. ಎಲ್ಲ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಮಾಫಿ ಮಾಡಬೇಕೆಂದು ಒತ್ತಾಯಿಸಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಭಾವ್ ಇಂದು ಪ್ರತಿಭಟನೆ ಮಾಡಿದರು. ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ ಭಾವ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಅವರನ್ನು ಬಂಧಿಸವುದಕ್ಕೂ ಮುನ್ನ ‘ದಯವಿಟ್ಟು ಮಕ್ಕಳ ಪರೀಕ್ಷೆಗಳನ್ನು ರದ್ದು ಮಾಡಿ. ಎಲ್ಲ ಖಾಸಗಿ ಶಾಲೆಗಳ ಶುಲ್ಕವನ್ನು ಈ ವರ್ಷ ಮನ್ನಾ ಮಾಡಿ. ಕೊರೊನಾ ಇಲ್ಲವಾದ ಬಳಿಕ ನೀವು ಬೇಕಾದರೆ ಮಕ್ಕಳಿಗೆ ಪರೀಕ್ಷೆ ಮಾಡಿ. ಆದರೆ ಈಗ ಮಕ್ಕಳ ಜೀವದೊಂದಿಗೆ ಆಟವಾಡಬೇಡಿ’ ಎಂದಿದ್ದರು.








