Vikram | ಬಾಹುಬಲಿ 2 ಸಿನಿಮಾದ ದಾಖಲೆ ಮುರಿದ ವಿಕ್ರಂ
ಸುಮಾರು ನಾಲ್ಕು ವರ್ಷಗಳ ನಂತರ ಬಾಕ್ಸ್ ಆಫೀಸ್ ಬಳಿ ಉಲಗ ನಾಯಗನ್ ಕಮಲ್ ಹಸನ್ ಸದ್ದು ಮಾಡುತ್ತಿದ್ದಾರೆ.
ವಿಕ್ರಂ ಸಿನಿಮಾದ ಮೂಲಕ ಕಮಲ್ ಹಸನ್ ಬ್ಲಾಕ್ ಬಸ್ಟರ್ ಹಿಟ್ ಟ್ರ್ಯಾಕ್ ಗೆ ಮರಳಿದ್ದಾರೆ.
ಈ ಸಿನಿಮಾದಲ್ಲಿ ಕಮಲ್ ಹಸನ್ ಜೊತೆ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಜಿಲ್, ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲೋಕೇಶ್ ಕನಕರಾಜು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಿನಿಮಾ ರಿಲೀಸ್ ಆದ 16 ದಿನಗಳಲ್ಲಿ ವಿಶ್ವದಾದ್ಯಂತ ಮೂನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದರಲ್ಲಿ ಅರ್ಧದಷ್ಟು ಅಂದ್ರೆ 150 ಕೋಟಿ ರುಪಾಯಿ ತಮಿಳುನಾಡಿನಲ್ಲಿ ಕಲೆಕ್ಷನ್ ಆಗಿದೆ.
ಇದರೊಂದಿಗೆ ತಮಿಳುನಾಡಿನಲ್ಲಿ ಬಾಹುಬಲಿ 2 ಸಿನಿಮಾದ ದಾಖಲೆಯನ್ನು ವಿಕ್ರಂ ಸಿನಿಮಾ ಮುರಿದಿದೆ.
ಮುಂದಿನ ದಿನಗಳಲ್ಲಿ ವಿಕ್ರಮ್ ಸಿನಿಮಾ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಲಿದೆ ಎಂಬುದು ಸಿನಿ ವಿಶ್ಲೇಷಕರ ಭವಿಷ್ಯವಾಗಿದೆ.








