ಬೆಂಗಳೂರು : ಚಂದ್ರನ ಮೇಲೆ ಕಾಲಿಟ್ಟ ವಿಕ್ರಮ್-3 ಮೊದಲ ಚಿತ್ರ ಬಿಡುಗಡೆ ಮಾಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಹೆಜ್ಜೆ ಇಟ್ಟ ನಂತರ ಮೊದಲ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ.
ವಿಕ್ರಮ್ ಲ್ಯಾಂಡಿಂಗ್ ಆಗುತ್ತಿರುವಾಗ ಕಳುಹಿಸಿದ 4 ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿತ್ತು. ಇಸ್ರೋ ಲ್ಯಾಂಡರ್ (Vikram Lander) ಜೊತೆ ಸಂಪರ್ಕ ಸಂವಹನ ಸಾಧಿಸಿದೆ. ಈ ಮೂಲಕ ಲಂಬವಾಗಿ ಲ್ಯಾಂಡಿಂಗ್ ಆಗುವ ವೇಳೆ ವಿಕ್ರಮ್ ಲ್ಯಾಂಡರ್ ನಾಲ್ಕು ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದೆ. ಇಸ್ರೋ (ISRO) ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ.