ಬುರ್ಜ್ ಖಲೀಫಾದಲ್ಲಿ ‘ಕಿಚ್ಚ’ನ ವಿಕ್ರಾಂತ್ ರೋಣ ಅವತಾರ ರಿವೀಲ್..!
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾವಾದ ‘ವಿಕ್ರಾಂತ್ ರೋಣ’ ನ ಹೊಸ ಸಾಹಸಕ್ಕೆ ವಿಶ್ವದ ಅತಿ ಎತ್ತರದ ಕಟ್ಟವಾದ ದುಬೈನ ಬುರ್ಜ್ ಖಲೀಫಾ ಸಾಕ್ಷಿಯಾಗಲಿದೆ. ಹೌದು ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ಟೈಟಲ್ ಲೋಗೋ ಇಂದು ದುಬೈನ ಅತ್ಯಂತ ಎತ್ತರದ ಕಟ್ಟದ ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ.
ಸಿನಿಪ್ರಿಯರಿಗೆ ಗುಡ್ ನ್ಯೂಸ್ : ಥಿಯೇಟರ್ ಗಳಲ್ಲಿ 100% ಸೀಟಿಂಗ್ : ಯಾವಾಗಿಂದ ಗೊತ್ತಾ..!
ಕಿಚ್ಚ ಸುದೀಪ್ ರ ‘ವಿಕ್ರಾಂತ್ ರೋಣ’ ಪಾತ್ರದ ಸರಿಸುಮಾರು 2000 ಅಡಿ ಕಟೌಟ್ ಇಂದು ರಾತ್ರಿ 9 ಗಂಟೆಗೆ ಅನಾವರಣಗೊಳ್ಳಲಿದೆ. ಇದು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ಪ್ರಸಾರವಾಗಲಿದೆ. ಈ ಕಟೌಟ್ ಕಟ್ಟಡದಲ್ಲಿ ಅನಾವರಣಗೊಳಿಸಲು ಚಿತ್ರತಂಡ ಸಾಕಷ್ಟು ಶ್ರಮಪಟ್ಟಿದೆಯಂತೆ. ಅವರ ಶ್ರಮದ ಪ್ರತಿಫಲ ಇಂದು ತಿಳಿದುಬರಲಿದೆ. ಸುದೀಪ್ ಚಿತ್ರ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ವಿಕ್ರಾಂತ್ ರೋಣ ತಂಡ ಈ ವಿಶೇಷ ಗೌರವ ನೀಡುತ್ತಿದೆ. ಅಲ್ದೇ ರಜನಿಕಾಂತ್ ಅಭಿನಯದ ರಫಬೋ 2 ಚಿತ್ರ ಬಿಟ್ರೆ ಬುರ್ಜ್ ಖಲೀಫಾದಲ್ಲಿ ಇಂತಹದೊಂದು ಸಾಧನೆಗೆ ಕೈಹಾಕಿರುವ ಹೆಮ್ಮೆ ನಮ್ಮ ಕನ್ನಡದ ಸಿನಿಮಾದ್ದು ಎಂಬುದು ಗಮನಾರ್ಹವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







