ವಿಕ್ರಾಂತ್ ರೋಣ… ಕಿಚ್ಚ ಸುದೀಪ್ ಅಭಿನಯದ ಭಾರತೀಯ ಸಿನಿಮಾರಂಗದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ… ಈ ಸಿನಿಮಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ..
ಬರೀ ಗ್ಲಿಂಪ್ಸ್ ಮೂಲಕವೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿರುವ ಈ ಸಿನಿಮಾದ ಟಯಟಲ್ ಲಾಂಚ್ ಆಗಿದ್ದು , ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ…
3ಡಿ ತಂತ್ರಜ್ಞಾನದಲ್ಲಿ ಮೂಡಡಿರುತತ್ತಿರುವ ಈ ಸಿನಿಮಾ ಅನೇಕ ವಿಚಾರಗಳಿಂದ ಜಗತ್ತಿನ ಗಮನ ಸೆಲೆದಿದೆ..
ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹರಿದಾಡ್ತಿದೆ.. ಅದೇನೆಂದ್ರೆ ಬಾಹುಬಲಿ , ಕೆಜಿಎಫ್ ಪುಷ್ಪ , ಮಾದರಿಯಲ್ಲೇ ಈ ಸಿನಿಮಾದ ಪಾರ್ಟ್ 2 ಬರಬಹುದು ಅನ್ನೋದು..
ಇದೆಲ್ಲದರ ನಡುವೆ ಈಗ ವಿಕ್ರಾಂತ್ ರೋಣ ರಿಲೀಸ್ ಅಪ್ ಡೇಟ್ಸ್ ಕೂಡ ಸಿಗುತ್ತಿದೆ.. ಅಂದ್ಹಾಗೆ ಸುಮಾರು 14 ಭಾಷೆಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿರುವ ವಿಕ್ರಾಂತ್ ರೋಣ ಸಿನಿಮಾ ಸುಮಾರು 3500 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿದೆ… ಪಾಕಿಸ್ತಾನವೂ ಸೇರಿದಂತೆ 27 ದೇಶಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ..
ಈ ಬಗ್ಗೆ ನಿರ್ಮಾಪಕ ಜಾಕ್ ಮಂಜು ಅವರು ಮಾಹಿತಿ ನೀಡಿದ್ದಾರೆ… ಈಗಾಗಲೇ ಸಿನಿಮಾಗಾಗಿ ಅಡ್ವಾನ್ಸ್ ಬುಕ್ಕಿಂಗ್ ಸಹ ಆರಂಭವಾಗಿದೆ..
ಕರ್ನಾಟಕದಲ್ಲಿ 425ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಬಾಲಿವುಡ್ ನಲ್ಲಿ 900 ಥಿಯೇಟರ್ಸ್, ಟಾಲಿವುಡ್ ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ಸ್ ವಿದೇಶಗಳಲ್ಲಿ 800 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗ್ತಿದೆ..








