ಪುನೀತ ರಾಜಕುಮಾರ ನಾಮಫಲಕ ಹಾಗೂ ಕನ್ನಡ ಬಾವುಟ ಕಿತ್ತುಹಾಕಿದ ಕಿಡಿಗೇಡಿಗಳು
ಕೊಪ್ಪಳ: ಪವರ್ ಸ್ಟಾರ್ ಡಾ. ಪುನೀತ ರಾಜಕುಮಾರ ಹೆಸರಲ್ಲಿ ಅಳವಡಿಸಲಾಗಿದ್ದ ನಾಮಫಲಕ ಹಾಗೂ ಕನ್ನಡ ಬಾವುಟವನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ನಾಮಫಲಕ ತೆಗೆದುಕೊಂಡು ಹೋಗಿ ಕೆರೆಯಲ್ಲಿ ಬಿಸಾಕಿದ್ದು, ಕಿಡಿಗೇಡಿಗಳು ನಾಮಫಲಕ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಹೂವಿನಾಳ ಗ್ರಾಮದಲ್ಲಿ ಅಭಿಮಾನಿಗಳು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪತ್ರೆಪ್ಪ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









