ಜೈಲಿನಿಂದ ಹೊರ ಬಂದ `ವಿನಯ್ ಕುಲಕರ್ಣಿ ಫಸ್ಟ್ ರಿಯಾಕ್ಷನ್’
ಬೆಳಗಾವಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. 9 ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ವಿನಯ್ ಕುಲಕರ್ಣಿಗೆ ಅದ್ಧೂರಿ ಸ್ವಾಗತ ದೊರಕಿದೆ.
ಅವರ ಅಭಿಮಾನಿಗಳು ಹೂವಿನ ಹಾರ, ಜೈಕಾರ ಹಾಕುವ ಮೂಲಕ ವಿನಯ್ ಕುಲಕರ್ಣಿಅವರನ್ನು ಬರಮಾಡಿಕೊಂಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿರ್ದೋಷಿಯಾಗಿ ಹೊರಗೆ ಬರುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ಈ ಹೋರಾಟದಿಂದ ಹೊರಗೆ ಬರುತ್ತೇನೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬಸ್ಥರು ನನಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ ಎಂದರು..
ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕ್ಷೇತ್ರದ ಜನ, ನನ್ನನ್ನು ನಂಬಿದವರಿಗಾಗಿ ಎಂತಹದ್ದೇ ಹೋರಟವಾದರೂ ಮಾಡಲು ಸಿದ್ಧ. ಬರೋಬ್ಬ 9 ತಿಂಗಳು 16 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಇದೊಂದು ಟಾಸ್ಕ್, ನಿಭಾಯಿಸಿದ್ದೇನೆ. ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ಇನ್ನೊಂದು ಖುಷಿ ವಿಚಾರ ಎಂದರೆ ನನಗೆ ಓದುವ ಹವ್ಯಾಸ ಇರಲಿಲ್ಲ. ಆದ್ರೆ ಜೈಲಿಗೆ ಬಂದು ಓದಲು ಕಲಿತಿದ್ದೇನೆ, ಸಾಕಷ್ಟು ಬದಲಾವಣೆ ಕಲಿತಿದ್ದೇನೆ, ಮುಂಬರುವ ದಿನಗಳಲ್ಲಿ ಯಾವ ರೀತಿ ಇರಬೇಕೆನ್ನುವುದನ್ನು ಕಲಿತಿದ್ದೇನೆ ಎಂದು ತಿಳಿಸಿದರು.