ಪುಷ್ಪಾ ಸರಣಿಯ ನೆಕ್ ಬ್ಯಾಂಡ್ ಹೆಡ್ ಪೋನ್ ಬಿಡುಗಡೆ ಮಾಡಿದ ವಿಂಗ್‌ಜಾಯ್

1 min read

ಪುಷ್ಪಾ ಸರಣಿಯ ನೆಕ್ ಬ್ಯಾಂಡ್ ಹೆಡ್ ಪೋನ್ ಬಿಡುಗಡೆ ಮಾಡಿದ ವಿಂಗ್‌ಜಾಯ್

ದೇಶೀಯ ಕಂಪನಿ ವಿಂಗ್‌ಜಾಯ್ ತನ್ನ ಪ್ರೀಮಿಯಂ ವಿಂಗ್‌ಜಾಯ್ CL-404 ಪುಷ್ಪಾ ಸರಣಿಯ ವೈರ್‌ಲೆಸ್ ನೆಕ್‌ಬ್ಯಾಂಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.  ಕಾನ್ಫರೆನ್ಸ್ ಕರೆಗಳು ಮತ್ತು ಸಂಗೀತ ಕೇಳುವುದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ವೈರ್‌ಲೆಸ್ ನೆಕ್‌ಬ್ಯಾಂಡ್ ಇದಾಗಿದೆ,  ಕಂಪನಿ  ಈ ಸರಣಿಗೆ ಪುಷ್ಪ ಎಂದು ಏಕೆ ಹೆಸರಿಟ್ಟಿದೆ ? ಅದರಲ್ಲಿ ಪುಷ್ಪಾಗೆ ಸಂಬಂಧಿಸಿದ ವಿಶೇಷತೆ ಏನು ? ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಸಧ್ಯ ಪುಷ್ಪಾ ಚಿತ್ರದ ಟ್ರೆಂಡಿಂಗ್ ಹೆಸರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ನೆಕ್‌ಬ್ಯಾಂಡ್‌ಗೆ ಪುಷ್ಪ ಎಂದು ಹೆಸರಿಟ್ಟಿದೆ ಎಂದು  ಊಹೇಮಾಡಿಕೊಳ್ಳಬಹುದು.

ಉತ್ತಮ HD ಆಡಿಯೊ ಗುಣಮಟ್ಟವನ್ನ ನೀಡುವುದಾಗಿ ಕಂಪನಿ ಹೇಳಿದೆ.  ಒಂದು ಬಾರಿ ಚಾರ್ಜಿಂಗ್‌ ಮಾಡಿದರೆ 25 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.  ಇದು 250 ಗಂಟೆಗಳ ಸ್ಟ್ಯಾಂಡ್‌ಬೈ ಸಹ ನೀಡುತ್ತದೆ. ಈ ಟ್ರೆಂಡಿ ನೆಕ್‌ಬ್ಯಾಂಡ್ ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಹೊಂದಿದೆ. ಈ ನೆಕ್‌ಬ್ಯಾಂಡ್‌ನ ಬೆಲೆಯನ್ನು 1,999 ರೂಗಳಿಗೆ ನಿಗದಿಪಡಿಸಲಾಗಿದೆ. ಎಲ್ಲಾ ರೀಟೇಲ್ ಅಂಗಡಿಗಳಲ್ಲಿ ಈ ನೆಕ್ ಬ್ಯಾಂಡ್ ಕೊಂಡುಕೊಳ್ಳಬಹುದು. ವಿಂಗ್‌ಜಾಯ್ CL-404 ಪುಷ್ಪಾ ಸರಣಿಯ ವೈರ್‌ಲೆಸ್ ನೆಕ್‌ಬ್ಯಾಂಡ್ ಬ್ಲೂಟೂತ್ v5.0 ನೊಂದಿಗೆ ಕನೆಕ್ಟಿವಿಟಿಯನ್ನ ಒಳಗೊಂಡಿದೆ. Android ಮತ್ತು iOS ಸಾಧನಗಳೊಂದಿಗೆ ಸಂಪರ್ಕಿಸಬಹುದು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd