ಭಾರತದ ನೆರವಿಗೆ ನಿಂತ ಕೋಟ್ಯಾಧಿಪತಿ ವಿನೋದ್ ಖೋಸ್ಲಾ – ಆಮ್ಲಜನಕ ಪೂರೈಕೆಗಾಗಿ 10 ಮಿಲಿಯನ್ ಡಾಲರ್ ದೇಣಿಗೆ

1 min read

ಭಾರತದ ನೆರವಿಗೆ ನಿಂತ ಕೋಟ್ಯಾಧಿಪತಿ ವಿನೋದ್ ಖೋಸ್ಲಾ – ಆಮ್ಲಜನಕ ಪೂರೈಕೆಗಾಗಿ 10 ಮಿಲಿಯನ್ ಡಾಲರ್ ದೇಣಿಗೆ

ಅಮೆರಿಕಾ : ಭಾರತದಲ್ಲಿ ಕೋವಿಡ್ 2ನೇ ಅಲೆ ಸಂಕಷ್ಟದ ನಡುವೆ ಬೆಡ್ ಕೊರತೆ ಆಕ್ಸಿಜನ್ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲಿ ಅನೇಕ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ಭಾರತದ ನೆರವಿಗೆ ಮುಂದಾಗುತ್ತಿದ್ಧಾರೆ. ಇದೀಗ ಭಾರತೀಯ- ಅಮೆರಿಕನ್ ಮೂಲದ ಕೋಟ್ಯಾಧಿಪತಿ ಉದ್ಯಮಿ ವಿನೋದ್ ಖೋಸ್ಲಾ  ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಘೋಷಿಸಿದ್ದಾರೆ.

ಸನ್ ಮೈಕ್ರೊಸಿಸ್ಟಮ್ ಸಹ ಸಂಸ್ಥಾಪಕರಾಗಿರುವ ವಿನೋದ್ ಖೋಸ್ಲಾ, ಆಕ್ಸಿಜನ್ ಪೂರೈಸಲು ಆಸ್ಪತ್ರೆಗಳಿಗೆ ಹಣ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿರುವ ಅವರು ಹೆಚ್ಚಿನ ವಿಳಂಬವು ಹೆಚ್ಚಿನ ಸಾವುಗಳಿಗೆ ಕಾರಣವಾಗುವುದರಿಂದ ಜೀವಗಳನ್ನು ಉಳಿಸುವ ಅವಶ್ಯಕತೆಯಿದೆ ಎಂದಿದ್ದಾರೆ. 20 ಸಾವಿರ ಆಕ್ಸಿಜನ್ ಸಾಂದ್ರಕಗಳು, 15 ಸಾವಿರ ಆಕ್ಸಿಜನ್ ಸಿಲಿಂಡರ್ ಗಳು, 500 ಐಸಿಯು ಬೆಡ್ ಗಳು ಸೇರಿದಂತೆ ವಿವಿಧ ವೈದ್ಯಕೀಯ ನೆರವು ಕೋರಿ ಭಾರತದಲ್ಲಿನ ಆಸ್ಪತ್ರೆಗಳಿಂದ ಪ್ರತಿನಿತ್ಯ ಮನವಿ ಬರುತ್ತಿದೆ. ನಾವು ತುರ್ತಾಗಿ  ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ.

ಮತ್ತೆ ಸ್ತಬ್ಧವಾಗಲಿದೆ ಭಾರತ : ದೇಶದಾದ್ಯಂತ ಲಾಕ್ ಡೌನ್ ಗೆ ಚಿಂತನೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd