ಸಂಶೋದಕ ಲೇಖಕ ಅಂಬ್ರಯ್ಯ ಮಠ ವಿರಚಿತ ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ ಐತಿಹಾಸಿಕ ಕಾದಂಬರಿ:
ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ. ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.
ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು. ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ ಪ್ರೇಮ ವಿವಾಹ ಇದಕ್ಕೆ ಕಾರಣವೇ? ದುರಂತ ನಾಯಕಿ ಚಂಪಕಾರಾಣಿಯಿಂದ ಹೀಗಾಯಿತೆ? ಎಂಬ ಬಗ್ಗೆ ಮುಂದಿನ ದಿನದಲ್ಲಿ ಸಂಶೋದನೆ ಆಗಬೇಕು. ಮುಂದಿನ ದಿನದಲ್ಲಿ ಇತಿಹಾಸ ಸಂಶೋದಕರು, ಶಾಲಾ ಕಾಲೇಜುಗಳಲ್ಲಿ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ವಿಷಯ ತಿಳಿಸಲು ಈ ಪುಸ್ತಕ ಪ್ರೇರಣೆ ಆಗಬೇಕು.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಇಟಲಿಯ ಪ್ರವಾಸಿ ಪಿಯೆಟ್ರೋ ಡಲ್ಲೊ ವಿಲ್ಲಾ ಇಕ್ಕೇರಿಯಲ್ಲಿ ವೆಂಕಟಪ್ಪ ನಾಯಕರ ಬೇಟಿ ಮಾಡಿದ ಬಗ್ಗೆ ಬರೆದ ದಾಖಲೆ ಈ ಪುಸ್ತಕದಲ್ಲಿದೆ. ರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ, ಬಿದನೂರಿನ ರಾಣಿ ಅಮ್ಮಿದೇವಮ್ಮ ವೆಂಕಟಪ್ಪ ನಾಯಕರಿಂದ ಸಹಾಯ ಕೇಳಿ ರಾಜ್ಯ ಕಳೆದುಕೊಂಡ ಕಥೆ ಅವರೇ ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಅಂಬ್ರಯ್ಯ ಮಠರು ಸ್ವಾರಸ್ಯವಾಗಿ ಹೇಳಿಸಿದ್ದಾರೆ. ಅದೇ ರೀತಿ ಪಟ್ಟದ ರಾಣಿ ಭದ್ರಮ್ಮಾಜಿ, ಚಂಪಕಾ ಮತ್ತು ಶಿವಪ್ಪ ನಾಯಕರಿಂದಲೂ ಇತಿಹಾಸ ನಮಗೆ ಮನನ ಮಾಡುವಂತೆ ಬರೆದಿದ್ದಾರೆ. ಅನೇಕ ವಿದ್ವತ್ ಪೂರ್ಣ ಲೇಖನ ಬರಹಗಳನ್ನೂ, ಕಾದಂಬರಿಗಳನ್ನು ಬರೆದ ಅಂಬ್ರಯ್ಯ ಮಠರು ತಮ್ಮ ಸಂಶೋದನೆಗಾಗಿಯೇ ಕೆಳದಿ ರಾಜರ ಹಾಲಿ ಪಳಯುಳಿಕೆ ಆಗಿರುವ ರಾಜದಾನಿ ಬಿದನೂರು ನಗರದಲ್ಲಿ ನೆಲೆಸಿದ್ದಾರೆ ಅನ್ನುವುದು ಇನ್ನೊಂದು ವಿಶೇಷ.
-ಅರುಣ್ ಪ್ರಸಾದ್
ಉದ್ಯಮಿಗಳು ಮತ್ತು ಹವ್ಯಾಸಿ ಬರಹಗಾರರು
ಆನಂದಪುರ, ಸಾಗರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel