viral News
ಕೋಮಾಗೆ ಹೋದ ವ್ಯಕ್ತಿಗಳು ಕೋಮಾದಿಂದ ಆಚೆ ಬರೋದು ತುಂಬಾನೆ ಕಡಿಮೆ. ಅದ್ರಲ್ಲೂ ಕೋಟಿಯಲ್ಲಿ ಒಬ್ರು ಅಂತ ಹೇಳಬಹುದು. ಆದ್ರೆ ಇಲ್ಲೊಬ್ಬ 62 ದಿನಗಳಿಂದಲೂ ಕೋಮಾದಲ್ಲಿ ಯುವಕ ಜಸ್ಟ್ ತನ್ನ ಫೇವರೇಟ್ ಫುಡ್ ಹೆಸರು ಕೇಳ್ತಿದ್ದಂತೆ ಕೋಮಾದಿಂದ ಎದ್ದು ಬಂದು ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾನೆ. ಹೌದು ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯ ಹಾಗೂ ಮೂಡ್ನ್ನ ಸುಧಾರಿಸುವ ಸಾಮರ್ಥ್ಯ ಹೊಂದಿವೆ ಅಂತ ಕೇಳಿರ್ತಿವಿ. ಆದ್ರೆ ಜೀವನವನ್ನೂ ಉಳಿಸುತ್ತೆ ಅನ್ನೋ ಹೊಸ ವಿಚಾರಕ್ಕೆ ಸಾಕ್ಷಿ ಈ ಯುವಕ.
ಅಂದ್ಹಾಗೆ ತೈವಾನ್ ನಲ್ಲಿ ತನಗೆ ತುಂಬಾ ಇಷ್ಟವಾದ ಆಹಾರ ಪದಾರ್ಥದ ಹೆಸರನ್ನ ಕೇಳ್ತಿದ್ದಂತೆ ಯುವಕನೋರ್ವ ಕೋಮಾದಿಂದ ಎದ್ದುಕೂತಿದ್ದಾನೆ.
62 ದಿನಗಳಿಂದ ಕೋಮಾದಲ್ಲಿದ್ದ 18 ವರ್ಷದ ಯುವಕ ಆತನ ಇಷ್ಟವಾದ ಖಾದ್ಯವಾದ ಚಿಕನ್ ಫಿಲೆಟ್ಸ್ ಹೆಸರು ಕೇಳುತ್ತಿದ್ದಂತೆಯೇ ಕೋಮಾದಿಂದ ಹೊರಬಂದಿದ್ದಾನಂತೆ. ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಯು ಕೋಮಾಗೆ ಜಾರಿದ್ದ. ಆಸ್ಪತ್ರೆ ಸಿಬ್ಬಂದಿ ಸಾಕಷ್ಟು ಪ್ರಯತ್ನದ ನಡುವೆಯೂ ಕೋಮಾದಿಂದ ಹೊರಬಾರದ ಚಿಯು ಕೋಮಾದಿಂದ ಮತ್ತೆ ವಾಪಸ್ ಬರುತ್ತಾನೆ ಅನ್ನೋ ನಂಬಿಕೆಯನ್ನೇ ವೈದ್ಯರು ಹಾಗೂ ಕುಟುಂಬದವರು ಕಳೆದುಕೊಂಡುಬಿಟ್ಟಿದ್ದರು. ಇದರ ನಡುವೆ ಆತನ ಸಹೋದರ ಚಿಕನ್ ಫಿಲ್ಲೆಟ್ಸ್ ಎಂಬ ಹೆಸರು ಹೇಳ್ತಿದ್ದಂತೆಯೇ ಕಣ್ಣು ಬಿಟ್ಟಿದ್ದಾನೆ.
ಶಂಕರಣ್ಣನ 66ನೇ ಹುಟ್ಟುಹಬ್ಬ : ‘ಆಟೋರಾಜ’ನ ನೆನೆದ ರಾಜಕೀಯ ಗಣ್ಯರು
viral News
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel