VIDEO : ಮಹಿಳೆಗೆ ಇದೆಂಥಾ ಶಿಕ್ಷೆ : ಮೈದುನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳೆ..!
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಮಹಿಳೆಯನ್ನು ಕೋಲು-ದೊಣ್ಣೆ ಹಿಡಿದ ಯುವಕರು ಗುಂಪು ಬೆದರಿಕೆ ಹಾಕುತ್ತಾ ಮಹಿಳೆಯನ್ನು ನಡೆಸಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಎಲ್ಲೆಡೆ ವೈರಲ್ ಆಗ್ತಿದೆ.
ಈ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಮೈದುನನ್ನು ಬಲವಂತವಾಗಿ ಹೆಗಲ ಮೇಲೆ ಹೊರಿಸಿ ಕನಿಷ್ಠ 3 ಕಿ.ಮೀ. ನಡೆಸಿಕೊಂಡು ಹೋಗುವ ಘೋರ ಶಿಕ್ಷೆ ವಿಧಿಸಿದ್ದು, ಆಕೆ ಆತನನ್ನ ಹೆಗಲ ಮೇಲೊತ್ತು ಊರು ಸುತ್ತುತ್ತಿದ್ದಾರೆ. ಮಹಿಳೆಯ ಅಸಹಾಯಕತೆಗೆ ಮರುಕ ವ್ಯಕ್ತಪಡಿಸುವ ಬದಲು, ಆಕೆಯನ್ನ ಹೀಯಾಳಿಸುತ್ತಾ, ಕೋಲು ಹಿಡಿದು ಬೆದರಿಸುತ್ತಾ ಆಕೆಯನ್ನ ಅಲ್ಲಿನ ಜನ ಓಡಾಡುಸುತ್ತಿರುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ.
ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನಕಲಿ ನರ್ಸ್ ಮಾಡಿದ್ದೇನ್ ನೋಡಿ..!
ಮಹಿಳೆ ನಡೆದುಕೊಂಡು ಹೋಗುತ್ತಿದ್ದರೆ ಯುವಕರು ಗೇಲಿ ಮಾಡಿ ನಗುತ್ತಿದ್ದು, ಇನ್ನು ಕೆಲವರು ದೊಣ್ಣೆ ಹಾಗೂ ಕ್ರಿಕೆಟ್ ಬ್ಯಾಟ್ ನಿಂದ ಕೂಡ ಹೊಡೆದಿದ್ದಾರೆ. ಇನ್ನೂ ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದುವರೆಗೆ ನಾಲ್ವರನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ.
ಇನ್ನೂ ಈ ಮಹಿಳೆ ಮತ್ತೊಬ್ಬ ಪುರುಷನ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಲ್ದೇ ರಾಜಿ ಸಂಧಾನದ ಮೂಲಕ ಗಂಡನನ್ನು ತೊರೆದಿದ್ದಳು. ಆದರೆ ಕೆಲವು ದಿನಗಳ ನಂತರ ಮಾಜಿ ಪತಿ ಹಾಗೂ ಆತನ ಕುಟುಂಬದವರು ಆಕೆಯ ಮನೆಗೆ ನುಗ್ಗಿ ಈ ರೀತಿಯಾದ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರೂ ನೀಡಿದ್ದಾರೆ.
BPL ಕಾರ್ಡುದಾರರಿಗೆ ಬಿಗ್ ರಿಲೀಫ್ : ಬೈಕ್, ಟಿವಿ, ಫ್ರಿಡ್ಜ್ ಇದ್ರೂ ರದ್ದಾಗಲ್ಲ ನಿಮ್ಮ ರೇಷನ್ ಕಾರ್ಡ್
ಇನ್ನೂ ಮಧ್ಯಪ್ರದೇಶದಲ್ಲಿ ಮಹಿಳೆಯರನ್ನು ಈ ರೀತಿ ಅಮಾನುಷವಾಗಿ ನಡೆಸಿಕೊಳ್ಳುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಕೂಡ ಇಂತಹದ್ದೇ ಘಟನೆ ನಡೆದಿತ್ತು. ಮಹಿಳೆಯೊಬ್ಬಳು ತನ್ನ ಗಂಡನನ್ನ ಹೆಗಲ ಮೇಲೆ ಹೊತ್ತು ಇಡೀ ಊರು ಸುತ್ತಿದ್ದಳು. ಆಗಲೂ ಅದರ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆ ನಡೆದಿದೆ.
ದಿಶಾ ರವಿ ಬಂಧನಕ್ಕೆ ಪಾಕ್ ಆಕ್ರೋಶ – ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ : ಇಮ್ರಾನ್..!
A married tribal woman in Guna was beaten up, shamed and forced to carry her relatives on her shoulders as punishment @ndtv @ndtvindia @NCWIndia @sharmarekha @ChouhanShivraj @drnarottammisra @OfficeOfKNath @manishndtv @GargiRawat @vinodkapri @rohini_sgh pic.twitter.com/H8ZJL8m86g
— Anurag Dwary (@Anurag_Dwary) February 15, 2021