ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಚಿತ್ರದುರ್ಗ : ಮಹಿಳೆಯೊಬ್ಬರು ಖಾಸಗಿ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಿರಿಯೂರು ನಗರದ ಬೆಂಗಳೂರು ರಸ್ತೆಯಲ್ಲಿರುವ ಕೋಡಿಹಳ್ಳಿ, ರಂಗನಾಥಪುರ, ಪಿಟ್ಲಾಲಿ ಬಸ್ ನಿಲ್ದಾಣ ಪಕ್ಕದಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಖಾಸಗಿ ವೈದ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ವೀಡಿಯೋ ವೈರಲ್ ಮಾಡಿದ್ದಾರೆ.
ಆದ್ರೆ ಮಹಿಳೆ ಯಾವ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂಬುದು ಇನ್ನೂವರೆಗೂ ಸ್ಪಷ್ಟವಾಗಿಲ್ಲ. ಹಲ್ಲೆಗೊಳಗಾದ ಡಾ. ಗಾಜಾನನ ಖಾಸಗಿ ವೈದ್ಯ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ರಸ್ತೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಆದ್ರೆ ವೈರಲ್ ಆಗಿರೋ ವಿಡಿಯೋದಲ್ಲಿ ಮಹಿಳೆ ಮಾತನಾಡಿರೋ ಮಾತುಗಳು ಕೂಡ ಕೇಳಿಸುತ್ತಿದೆ. ವಿಡಿಯೋದಲ್ಲಿ ಮಹಿಳೆಯು ‘ನಿನ್ನ ಹೆಂಡ್ತಿ, ಮಕ್ಕಳು ಮಾತ್ರ ಚೆನ್ನಾಗಿರಬೇಕು, ನಾವೇನು ಬೀದಿ ಬೀಕರಿಗಳಾ, ನನ್ನ ಜೀವನ ನಾನು ಚೆನ್ನಾಗಿ ಇಟ್ಕೊಂಡ್ರೆ, ನಿನ್ನ ಹೆಂಡ್ತಿ ನನ್ ಬಗ್ಗೆ ಕಂಪ್ಲೀಟ್ ಕೊಡ್ತಾಳಾ ಎಂದಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಯಾವ ಸಂದರ್ಭಕ್ಕೆ ಹೀಗೆ ಹೇಳಿದ್ದಾರೆ ಇನ್ನೂವರೆಗೂಗೊತ್ತಾಗಿಲ್ಲ.
ಇತ್ತ ವೈದ್ಯ ತಪ್ಪಾಯ್ತು ಎಂದ್ರು ಮಹಿಳೆಯ ಜೊತೆ ಇನ್ನಿಬ್ಬರು ಪುರುಷರು ಹಲ್ಲೆ ನಡೆಸಿರೋದು ಕೂಡ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ವೈದ್ಯ ಎಸ್ಕೇಪ್ ಆಗಿರೋದಾಗಿ ವರದಿಯಾಗಿದೆ.
ಅಸ್ಸಾಂ , ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ 2ನೇ ಹಂತದ ಮತದಾನ..!