ಟಿಕ್ ಟಾಕ್ ನಲ್ಲಿ ಮೈಮರೆತ ಪಾಕ್ ಯುವಕನ ಮೇಲೆ ಹರಿದ ರೈಲು..!
ಟಿಕ್ ಟಾಕ್ ಹುಚ್ಚು ಯಾವೆಲ್ಲಾ ಅನಾಹುತಗಳಿಗೆ ಕಾರಣವಾಗಬಹುದು ಅನ್ನೋದನಕ್ಕೆ ಈಗಾಗಲೇ ಅನೇಕ ಪ್ರಕರಣಗಳು ಉದಾಹರಣೆಯಾಗಿದೆ. ಇದೇ ಟಿಕ್ ಟಾಕ್ ಹುಚ್ಚಾಟಕ್ಕೆ ಬಿದ್ದು ಅನೇಕರು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ.
ಇಲ್ಲೊಬ್ಬ ಯುವಕ ತನ್ನ ಹಿಂದೆ ರೈಲು ಬರುತ್ತಿರುವ ಪರಿವೇ ಇಲ್ಲದೇ ಟಿಕ್ ಟಾಕ್ ಮಾಡೋ ಖಯಾಲಿಲಿ ಪ್ರಾಣ ಕಳೆದುಕೊಂಡಿದ್ದಾನೆ. ಹೌದು ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗ್ತಾ ಟಿಕ್ ಟಾಕ್ ಮಾಡೋಕೆ ಹೋದ ಪಾಕಿಸ್ತಾನಿ ಯುವಕ ರೈಲು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಶ್ರೀಕೃಷ್ಣ ಪರಮಾತ್ಮನನ್ನ ಕಾಣಬೇಕೆಂಬ ಹಂಬಲದಲ್ಲಿ 6ನೇ ಮಹಡಿಯಿಂದ ಜಿಗಿದ ರಷ್ಯನ್ ಮಹಿಳೆ!
ರಾವಲ್ಪಿಂಡಿ ನಗರದ ಶಾಹ್ ಖಾಲೀದ್ ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಹಮ್ಜಾ ನವೀದ್ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗ್ತಿದ್ರೆ ಆತನ ಗೆಳೆಯ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ. ಈ ವೇಳೆ ಹಿಂದೆ ಇಂದ ಬಂದ ಟ್ರೇನ್ ಆತನಿಗೆ ಗುದ್ದಿಕ್ಕೊಂಡೇ ಹೋಗಿದೆ. ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಾಗ್ಲೇ ಆತ ಮೃತಪಟ್ಟಿದ್ದು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








