ಮುಹೂರ್ತ ಇದ್ದಿದ್ದು ಮಧ್ಯಾಹ್ನ, ವರ ಬಂದಿದ್ದು ರಾತ್ರಿ, ಸಿಟ್ಟಿಗೆದ್ದ ವಧು ಬೇರೆಯವನ ಕೈ ಹಿಡಿದಳು..!
ಉತ್ತರ ಪ್ರದೇಶ: ಅದದೆಷ್ಟೋ ಮದುವೆಗಳು ನಾನಾ ಕಾರಣಗಳಿಂದಾಗಿ ಮುರಿದು ಬಿದ್ದಿವೆ. ಆದ್ರೆ ಉತ್ತರಪ್ರದೇಶದಲ್ಲಿ ಮದುವೆ ಮುರಿದು ಬಿದ್ದ ಕಾರಣ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಅಷ್ಟೇ ಅಲ್ಲ ವರನಿಗೆ ವಧು ಕೊಟ್ಟ ಗಿಫ್ಟ್ ಗೆ ಮದುವೆ ಮನೆಯಲ್ಲಿದ್ದವರೆಲ್ಲಾ ದಂಗಾಗಿಹೋಗಿದ್ದಾರೆ. ಉತ್ತರ ಪ್ರದೇಶದ ಬಿಜನೂರಿನಲ್ಲಿ ನಡೆದಿದ್ದ ಸಾಮೂಹಿಕ ವಿವಾಹದಲ್ಲಿ ಜೋಡಿಯೊಂದು ಹಸೆಮಣೆ ಏರಬೇಕಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ನಿಗದಿಯಾಗಿದ್ದ ವರನ ಜೊತೆಗೆ ಬಿಟ್ಟು ಬೇರೆಯವನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ ವಧು.. ಅಂದ್ಹಾಗೆ ಮದುವೆಯ ಮುಹೂರ್ತ ಮಧ್ಯಾಹ್ನ 1.30ಕ್ಕೆ ಫಿಕ್ಸ್ ಆಗಿತ್ತು. ವರನ ಕಡೆಯವರಿಗಾಗಿ ವಧುವಿನ ಕಡೆಯವರು ಕಾದು ಕಾದು ಸುಸ್ತಾಗಿದ್ದರು. ಆದ್ರೆ ಈಗ ಬರುತ್ತೇವೆ, ಆಗ ಬರುತ್ತೇವೆ, ದಾರಿಯ ಮೇಲೆ ಇದ್ದೇವೆ ಅಂತ ಹೇಳುತ್ತಿದ್ದವರು ಸಂಜೆಯಾದ್ರು ಪ್ರತ್ಯಕ್ಷವಾಗಿರಲಿಲ್ಲ.
`ಪ್ರಶಾಂತ್ ನೀಲ್ ಕಥೆ’ಯಲ್ಲಿ `ಬಘೀರನಾದ ಶ್ರೀಮುರಳಿ’
ವಧು ನೋಡಿ ನೋಡಿ ಸುಸ್ತಾಗಿದ್ದಳು. ಇತ್ತ ವಧುವಿನ ಕುಟುಂಬದವರ ಕೋಪವೂ ನತ್ತಿಗೇರಿತ್ತು.
ರಾತ್ರಿ ಯಾಗುತ್ತಾ ಇದ್ದಂತೆ ವರನ ಕಡೆಯವರೇನೋ ಬಂದ್ರು. ಆದ್ರೆ ಮಂಟಪ ತಲುಪಿದ ವರ ಹಾಗೂ ಅವರ ಸಂಬಂಧಿಕರನ್ನ ಪ್ರತ್ಯೇಕವಾಗಿ ಕೊಠಡಿಗಳಲ್ಲಿ ದೂಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಹಲ್ಲೆ ಮಾಡುವುದಕ್ಕೂ ಮತ್ತೊಂದು ಕಾರಣ ಇದೆ. ಹೌದು ಸಾಮೂಹಿಕ ವಿವಾಹದಲ್ಲಿ ಇಬ್ಬರ ಮದುವೆಯಾದ ಮೇಲೆ ವರನ ಕುಟುಂಬಸ್ಥರು ಬೇಡಿಕೆಯಿಟ್ಟಿದ್ದರಂತೆ. ಇದೇ ವಿಚಾರವಾಗಿ ಎರೆಡೂ ಕುಟುಂಬಗಳ ನಡುವೆ ಗಲಾಟೆ ಏರ್ಪಟ್ಟಿತ್ತು. ಇದೇ ವಿಚಾರವಾಗಿ ವಧುವಿನ ಕಡೆಯವರಿಗೆ ಬುದ್ದಿ ಕಲಿಸಬೇಕೆಂದು ವರನ ಕಡೆಯವರು ಬೇಕಂತಲೇ ತಡವಾಗಿ ಬಂದಿದ್ದಾರೆ. ವಧುವಿನ ಕುಟುಂಬಕ್ಕೆ ಬುದ್ದಿ ಕಲಿಸೋಕೆ ಹೋಗಿ ತಾವೇ ಸಖತ್ ಪಾಠ ಕಲಿತಿದ್ದಾರೆ.
ಬಳಿಕ ವಧುವಿನ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.. ಅಷ್ಟೇ ಅಲ್ಲ ಇದೇ ಸಿಟ್ಟಿನಲ್ಲಿ ವಧು ಅದೇ ಗ್ರಾಮದ ಯುವಕನ ಜತೆ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel