ನಾಯಿಗೆ ಊಟ ಹಾಕಲಿಲ್ಲ ಅಷ್ಟೇ ತಂಗಿ… ಗುಂಡಿಕ್ಕಿ ಜೀವವನ್ನೇ ತಗೆದ ಆ ಪಾಪಿ!
ಉತ್ತರಪ್ರದೇಶ: ಎಲ್ಲರಿಗೂ ತಾವು ಸಾಕಿದ ಪ್ರಾಣಿಗಳ ಮೇಲೆ ಪ್ರೀತಿ ಇರುತ್ತೆ. ಅದ್ರಲ್ಲೂ ನಾಯಿಗಳನ್ನ ತುಂಬಾನೆ ಮುದ್ದಾಗಿ ಅತಿ ಪ್ರೀತಿಯಿಂದ ನೋಡಿಕೊಳ್ತಾರೆ. ಆದ್ರೆ ಪ್ರೀತಿ ಅತೀರೇಖಕ್ಕೆ ಹೋದ್ರೆ ಎಂಥಹ ಅನಾಹುತಗಳಾಗ್ತವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ತಾನು ಸಾಕಿದ್ದ ನಾಯಿಗಳಿಗೆ ರೊಟ್ಟಿಗಳನ್ನ ಮಾಡಿ ಹಾಕಲಿಲ್ಲ ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ವಂತ ತಂಗಿಯನ್ನೇ ಕೊಲೆಗೈದ ದಾರುಣ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಪ್ರಾಣಿಗಳ ಹುಚ್ಚು ಪ್ರೇಮಿಯಾಗಿರೋ ಆಶೀಶ್, ಹಲವು ನಾಯಿಗಳನ್ನು ಸಾಕಿಕೊಂಡಿದ್ದ. ಆದ್ರೆ ನಾಯಿಗಳಿಗೆ ಊಟ ಹಾಕಲಿಲ್ಲವೆಂಬ ಚಿಕ್ಕ ವಿಚಾರಕ್ಕೆ ಆಕೆಯ ಜೀವವನ್ನೇ ತೆಗೆದಿದ್ದಾರೆ. 20 ವರ್ಷದ ಪಾರೂಲ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಅಂದ್ಹಾಗೆ ಈ ಆಶೀಶ್ ರಿಯಲ್ ಎಸ್ಟೇಟ್ ಡೀಲರ್ ಆಗಿದ್ದ. ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ತಂಗಿಯ ತಲೆ ಮತ್ತು ಎದೆಗೆ ಗುಂಡು ಹಾರಿಸಿ ಕ್ರೂರತೆ ಮೆರೆದಿದ್ದಾನೆ. ತಾಳ್ಮೆ ಕೆಟ್ಟ ಹತ್ಯೆ ಮಾಡಿದ್ದಾನೆ. ಪಾರೂಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel