ಕರ್ಮ : ಮರಕ್ಕೆ ನಿರಂತರವಾಗಿ ಒದ್ದ – ಮುಂದಾಗಿದ್ದು ಅನಾಹುತ – VIDEO VIRAL
ತಾವು ಏನು ಮಾಡ್ತೇವೋ ಅದು ನಮಗೆ ಒಂದಲ್ಲಾ ಒಮದು ರೂಪದಲ್ಲಿ ವಾಪಸ್ ಸಿಗುತ್ತೆ… ಅದುನ್ನೇ ಕರ್ಮ ಎನ್ನುವುದು.. ಒಳ್ಳೆಯದ್ದು ಮಾಡಿದ್ರೆ ಒಳ್ಲೆಯದ್ದೇ ಆಗುತ್ತೆ ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಆಗುತ್ತೆ ಅಂತ ಹಿರಿಯರು ಹೇಳ್ತಾರೆ.. ಈ ನಾಣ್ನುಡಿ ಈ ವಿಚಾರದಲ್ಲಿ ಸತ್ಯವಾಗಿದೆ… ಇನ್ಸ್ ಟೆಂಟ್ ರಿಗ್ರೇಟ್ ಪದ ಕೂಡ ಇದಕ್ಕೆ ಸ್ಯೂಟ್ ಆಗುತ್ತೆ..
ಹೌದು.. ವ್ಯಕ್ತಿಯೊಬ್ಬ ಮರವನ್ನು ಕಾಲಿನಿಂದ ನಿರಂತವಾಗಿ ಒದೆಯುತ್ತಲೇ ಇದ್ದ.. ಬಳಿಕ ಆ ಮರ ಆತನ ತಲೆಯ ಮೇಲೆ ಬಿದ್ದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದ್ದು ನೆಟ್ಟಿಗರು ತರಹೇವಾರಿ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
14 ಸೆಕೆಂಡ್ ಇರುವ ಈ ವೀಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವ್ಯಕ್ತಿಯೋರ್ವ ಮರವನ್ನು ತನ್ನ ಕಾಲಿನಿಂದ ಒದೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿರುವುದನ್ನು ಕಾಣಬಹುದಾಗಿದೆ.
ನಿರಂತರವಾಗಿ ಮರಕ್ಕೆ ಕಾಲಿನಿಂದ ವ್ಯಕ್ತಿ ಒದ್ದಿದ್ದು, ಕೊನೆಗೆ ಮರ ಆತನ ಮೇಲೆಯೇ ಬಿದ್ದು, ಆತನನ್ನು ಗಾಯಗೊಳಿಸಿದೆ. ಹೀಗಾಗಿ ವೀಡಿಯೋ ಜೊತೆಗೆ ಸುಧಾ ರಾಮೆನ್ ಅವರು ನೀವು ಮಾಡುವ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ನಿಮಗೆ ಹಿಂತಿರುಗಿ ಬರುತ್ತದೆ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.
https://twitter.com/SudhaRamenIFS/status/1410576921851613185
ಮಗನ ಗೇಮಿಂಗ್ ಹುಚ್ಚಿಗೆ ಪಾಪರ್ ಆದ ತಂದೆ..!







