ಮಗನ ಗೇಮಿಂಗ್ ಹುಚ್ಚಿಗೆ ಪಾಪರ್ ಆದ ತಂದೆ..!
ಇತ್ತೀಚೆಗೆ ವಿಡಿಯೋ ಗೇಮಿಂಗ್ಸ್ ಆನ್ ಲೈನ್ ಗೇಮಿಂಗ್ಸ್ಕ್ರೇಜ್ ಎಲ್ಲರಲ್ಲೂ ಹೆಚ್ಚಾಗಿದೆ.. ಅದ್ರಲ್ಲೂ ಮಕ್ಕಳಲ್ಲಿ ಇಂತಹ ಗೇಮ್ಸ್ ಗಳ ಮೇಲೆ ಆಸಕ್ತಿ ಹೆಚ್ಚಾಗ್ತಿದೆ.. ಆದ್ರೆ ಕೆಲವೊಮ್ಮೆ ಇದು ಸಾಕಷ್ಟು ಎಡವಟ್ಟುಗಳಿಗೂ ದಾರಿ ಮಾಡಿಒಡುತ್ತೆ. ಹೌದು.. ಇದೇ ರೀತಿ 7 ವರ್ಷದ ತನ್ನ ಮಗನ ಗೇಮಿಂಗ್ಸ್ ಹುಚ್ಚಿನಿಂದಾಗಿ ತಂದೆ ಒಂದೇ ಗಂಟೆಯಲ್ಲಿ ಸುಮಾರು $1800 ( 1.3 ಲಕ್ಷ ರೂಪಾಯಿ ) ಕಳೆದುಕೊಂಡಿರುವ ಘಟನೆ ನಡೆದಿದೆ…
ಯುನೈಟೆಡ್ ಕಿಂಗ್ ಡಂ ನ ಅಶಾಜ್ ಮುತಾಸಾ ಹೆಸರಿನ 7 ವರ್ಷದ ಬಾಲಕನೋರ್ವ ಐಫೋನ್‌ನಲ್ಲಿ ‘ಡ್ರಾಗನ್ಸ್: ರೈಸ್ ಆಫ್ ಬರ್ಕ್’ ಹೆಸರಿನ ಈ ಗೇಮ್ ಆಡುವ ವೇಳೆ ಪದೇ ಪದೇ ದುಬಾರಿ ಟಾಪ್ ಅಪ್‌ಗಳನ್ನು ಮಾಡಿಸಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ ಬಿಲ್ ಪಾವತಿ ಮಾಡಲು ತನ್ನ ಕಾರನ್ನು ಮಾರಬೇಕಾಗಿ ಬಂದಿದೆ.
1.99 ಪೌಂಡ್‌ನಿಂದ 99.99 ಪೌಂಡ್ ಗಳವರೆಗೆ ವಿವಿಧ ಮುಖಬೆಲೆಯ ಟಾಪ್ ಅಪ್‌ಗಳನ್ನು ಈ ಬಾಲಕ ಪದೇ ಪದೇ ಮಾಡಿದ್ಧಾನೆ.. ತನಗೆ ಬಂದಿದ್ದ 29 ಇ-ಮೇಲ್‌ಗಳನ್ನು ಚೆಕ್ ಮಾಡಿದ ಮೇಲೆ ತನ್ನ ಮಗ ಮಾಡಿರುವ ಎಡವಟ್ಟು ತಂದೆ ಮುಹಮ್ಮದ್ ಗಮನಕ್ಕೆ ಬಮದಿದೆ..
ಬಳಿಕ ಈ ಬಗ್ಗೆ ಆಪಲ್ ಗೆ ದೂರು ಕೊಟ್ಟ 207 ಪೌಂಡ್‌ಗಳ ರೀಫಂಡ್ ಪಡೆದಿದ್ದಾರೆ ಮುಹಮ್ಮದ್. ಆದರೂ ತಮ್ಮ ಮಗ ಮಾಡಿದ ಅವಾಂತರದಿಂದ ಬಂದಿದ್ದ ಬಿಲ್ ಪಾವತಿ ಮಾಡಲು ತಮ್ಮ ಬಳಿ ಇದ್ದ ಟೊಯೋಟಾ ಆಯ್ಗೋ ಕಾರನ್ನು ಮಾರಿದ್ದಾರೆ.
ವರನಿಗಾಗಿ ಜಾಹೀರಾತು… ವಧುವಿನ ಕಂಡೀಷನ್ ಕೇಳಿ ದಂಗಾದ ನೆಟ್ಟಿಗರು
ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹವನ್ನು ಮನರಂಜನಾ ವಸ್ತುವನ್ನಾಗಿ ಬಳಸಿಕೊಂಡ ಮಹಿಳೆ – ವಿಡಿಯೋ ವೈರಲ್