ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹವನ್ನು ಮನರಂಜನಾ ವಸ್ತುವನ್ನಾಗಿ ಬಳಸಿಕೊಂಡ ಮಹಿಳೆ – ವಿಡಿಯೋ ವೈರಲ್
ಪಾಕಿಸ್ತಾನ : ಜನರು ಶೋಕಿಗಾಗಿ ಎಂತಹ ಕೀಳು ಮಟ್ಟಕ್ಕೆ ಇಳಿಬಹುದು ಅನ್ನೋದಕ್ಕೆ ಪಾಕಿಸ್ತಾನನದ ಲಾಹೋರ್ ನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.. ಪಾಕಿಸ್ತಾನದ ಈ ಮಹಿಳೆ ತನ್ನ ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹವನ್ನು ಮನರಂಜನಾ ವಸ್ತುವನ್ನಾಗಿ ಬಳಸಿಕೊಂಡಿದ್ದಾಳೆ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗ್ತಿದ್ದು, ನೆಟ್ಟಿಗರು ಮಹಿಳೆ ವಿರುದ್ಧ ಅಷ್ಟೇ ಅಲ್ದೇ ಪಾರ್ಟಿಯಲ್ಲಿ ಬಾಗಿಯಾಗಿದ್ದವರ ಬಗ್ಗೆಯೂ ಆಕ್ರೋಶ ಹೊರಹಾಕುತ್ತಿದ್ದಾರೆ..
ಪ್ರಾಣಿಗಳು ಮನರಂಜನಾ ಅಥವ ಶೋಕಿಗಾಗಿ ಬಳಸಿಕೊಳ್ಳುವ ವಸ್ತುಗಳಲ್ಲ ಎಂದು ಕಿಡಿಕಾರುವ ಜೊತೆಗೆ ಅಲ್ಲಿನ ಪೊಲೀಸ್ ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸವಾಲುಗಳನ್ನ ಎತ್ತಿದ್ದಾರೆ.. ಸುಸಾನ್ ಖಾನ್ ಎಂಬಾಕೆ ಲಾಹೋರ್ ನಲ್ಲಿ ತನ್ನ ಬರ್ತ್‍ಡೇ ಪಾರ್ಟಿಯನ್ನು ಆ ಯೋಜಿಸಿದ್ದಳು. ಈ ವೇಳೆ ಸಿಂಹವೊಂದನ್ನು ಕಬ್ಬಿಣ ಚೈನ್ ಮೂಲಕ ಬಂಧಿಸಲ್ಪಟ್ಟಿದ್ದು, ಅದರ ಸುತ್ತಮುತ್ತಾ ಜನ ಸಾಂಗ್ ಪ್ಲೇ ಮಾಡಿಕೊಂಡು ಪಾರ್ಟಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ..
ಈ ವೀಡಿಯೋವನ್ನು ಪ್ರಾಜೆಕ್ಟ್ ಸೇವ್ ಅನಿಮಲ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪೀಠೋಕರಣದ ಮೇಲೆ ಸಿಂಹ ಮಲಗಿಕೊಂಡು ಅದರ ಕತ್ತಿನ ಸುತ್ತ ಕಬ್ಬಿಣದ ಸರಪಳಿ ಕಟ್ಟಲಾಗಿದೆ. ಅಲ್ಲದೇ ಈ ಸಿಂಹವನ್ನು ಸುಸಾನ್ ಖಾನ್ ತಮ್ಮ ಮನೆಯಲ್ಲಿಯೇ ಸಾಕಿದ್ದಾಳೆ ಎಂದು ವರದಿಯಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ ತಾಳ್ಮೆಯ ಕಟ್ಟೆ ಹೊಡೆದಿದ್ದು, ಆಕ್ರೋಶ ಭುಗಿಲೆದ್ದಿದೆ..
ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು..! VIDEO VIRAL
ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL
ಔತಣಕೂಟದಲ್ಲಿ ನಾನ್ ವೆಜ್ ಇಲ್ಲದಕ್ಕೆ ವಧು ಬಿಟ್ಟು ಬೇರೊಬ್ಬಳಿಗೆ ತಾಳಿ ಕಟ್ಟಿದ..!